ರಾಜ್ಯ ಸರ್ಕಾರ ಕಳೆದ 1 ವರ್ಷದ ಹಿಂದೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ ಪ್ರಮುಖವಾದ ಯೋಜನೆ ಅಂದ್ರೆ ಅದು ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ಬಡ ಕುಟುಂಬದ ಮಹಿಳೆಯರಿಗೆ ವರದಾನವಾಗಿದೆ. ಈ ಹಿಂದೆ ಗೃಹಲಕ್ಷ್ಮಿ ಯೋಜನೆ ಇಂದ ಬಂದ ಹಣದಲ್ಲಿ ಮಹಿಳೆಯೊಬ್ಬರು ಮನೆಗೆ ಫ್ರಿಡ್ಜ್ ಖರೀದಿಸಿ ಗೃಹ ಲಕ್ಷ್ಮಿ ಯೋಜನೆ ಎಂದು ನಾಮ ಫಲಕ ಹಾಕಿದ್ರು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದಾದ ಬಳಿಕ ಇನ್ನೊಬ್ಬರು ಮೊಬೈಲ್ ಫೋನ್ ಖರೀದಿಸಿದ್ರು. ಇನ್ನು ಕೆಲ ಮಹಿಳೆಯರು ಇದರಿಂದ ಬಂದ ಹಣದಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದ್ರು.
ರಾಮದುರ್ಗದ ಮನಿಹಾಳ ಗ್ರಾಮದ ಸಕ್ಕುಬಾಯಿ ಈರಣ್ಣ ಕರಿದಿನ ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದ ಹಣವನ್ನು ಕೂಡಿಟ್ಟು ಅದರಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. 10 ತಿಂಗಳ ಹಿಂದೆ ರಾಜ್ಯ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿತ್ತು. ಮೊದಲಿನಿಂದಲು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಸಕ್ಕುಬಾಯಿ ಚಿಕಿತ್ಸೆ ಮಾಡಿಸಲು ಹಣವಿಲ್ಲದೆ ಸುಮ್ಮನಾಗಿದ್ರು.
ಪತಿ ಈರಣ್ಣ ಕರಿದಿನ ನೇಕಾರರಾಗಿ ಕೆಲಸ ಮಾಡ್ತಿದ್ದು ತನ್ನ ಪತ್ನಿಯ ಬಳಗಣ್ಣಲ್ಲಿ ಪೊರೆ ಕಾಣಿಸಿಕೊಂಡಿತ್ತು. ಗೃಹಲಕ್ಷ್ಮಿ ಯೋಜನೆ ನಮ್ಮ ಕೈ ಹಿಡಿದಿದೆ ಎಂದು ಹೇಳಿದ್ದಾರೆ. ಚಿಕಿತ್ಸೆ ಗೆ ಒಟ್ಟು 25000 ಬಿಲ್ ಆಗಿತ್ತು ಗೃಹಲಕ್ಷ್ಮಿ ಇಂದ ಬಂದ 10 ತಿಂಗಳ ಹಣ ಕೂಡಿಟ್ಟು 20,000 ರೂ ಚಿಕಿತ್ಸೆಗಾಗಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.