ರಾಮನಗರ: ರಾಜ್ಯದಲ್ಲಿ ಇನ್ನು 15 ತಿಂಗಳಲ್ಲಿ ಗ್ಯಾರಂಟಿಗಳು ಸ್ಥಗಿತಗೊಳ್ಳುತ್ತವೆ. ಗೃಹಲಕ್ಷ್ಮಿಯ ಹಣ ಈಗ ಚನ್ನಪಟ್ಟಣದ ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇವರಿಗೆ ತಿಂದು ತಿಂದು ತೇಗಿ ತೇಗಿ ಅಜೀರ್ಣ ಆಗಿದೆ. ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ರು. ಈ ಸರ್ಕಾರ ತೆಗೆಯೋವರೆಗೂ ನಾನು ಮನೆಯಲ್ಲಿ ಮಲಗಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಶಪಥ ಮಾಡಿದರು.
ಚನ್ನಪಟ್ಟಣದಲ್ಲಿ ಮೊಮ್ಮಗನ ಪರ ಮಾಜಿ ಪ್ರಧಾನಿ ದೇವೇಗೌಡರು ಇಂದೂ ಸಹ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಹುಟ್ಟೂರಾದ ಚಕ್ಕೆರೆ ಗ್ರಾಮದಲ್ಲಿ ಗೌಡರು ಮತಬೇಟೆ ನಡೆಸಿದ್ದಾರೆ. ಚಕ್ಕೆರೆ ಗ್ರಾಮಕ್ಕೆ ದೇವೇಗೌಡರು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ವಾದ್ಯ, ಪೂರ್ಣಕುಂಭದೊಂದಿಗೆ ಹೂಮಳೆ ಸುರಿಸಿ ಬರಮಾಡಿಕೊಂಡರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನಿಖಿಲ್ ಪರ ಮತಯಾಚನೆ ನಡೆಸಿದ ದೇವೇಗೌಡರು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಕ್ಕೆರೆ ಗ್ರಾಮಕ್ಕೆ ನಾನು ಮೊದಲ ಬಾರಿಗೆ ಬರ್ತಿದ್ದೇನೆ. ನಿಖಿಲ್ ಕುಮಾರಸ್ವಾಮಿ ಎರಡು ಬಾರಿ ಸೋತಿದ್ದಾರೆ. ನಿಖಿಲ್ ಇನ್ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಅಂದರು. ಅಲ್ಲಿವರೆಗೂ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋ ಗುಟ್ಟು ಯಾರಿಗೂ ಬಿಟ್ಟಿಕೊಡಲಿಲ್ಲ? ನಿಖಿಲ್ ಚುನಾವಣೆಗೆ ನಿಲ್ಲುತ್ತಾರೆ ಅಂತ ಅವರು ಕನಸುಮನಸಿನಲ್ಲೂ ಅಂದುಕೊಂಡಿರಲಿಲ್ಲ. ಈಗಾಗಲೇ 18 ಸಭೆ ನಾನು ಮಾಡಿದ್ದೇನೆ. ನಿಖಿಲ್ ಕುಮಾರಸ್ವಾಮಿ ನೆಪದಲ್ಲಿ ನಿಮ್ಮನ್ನ ನೋಡೋ ಪುಣ್ಯ ಸಿಕ್ಕಿದೆ. 1973 ರಲ್ಲಿ ವಿಪಕ್ಷ ನಾಯಕನಾಗಿ ದೇವರಾಜ್ ಅರಸು ವಿರುದ್ಧ ಹೋರಾಟ ಮಾಡಿದ್ದೆ. ಅಂದು ಸೊಪ್ಪು ಸಾರು ಮಾಡಿದ ರೀತಿ ಇವತ್ತು ಸೊಪ್ಪು ಸಾರು ಸಿಗ್ತಿಲ್ಲ ಎಂದು ಹಳೆ ನೆನಪುಗಳನ್ನ ಮೆಲುಕುಹಾಕಿದರು.
ಇದನ್ನು ಓದಿ: ಹೆಂಡತಿ, ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಉದ್ಯಮಿ
ದೇವೇಗೌಡ ಮೊಮ್ಮಗನನ್ನ ಗೆಲ್ಲಿಸೋಕೆ ಇಲ್ಲಿಗೆ ಬಂದಿಲ್ಲ. ಈ ರಾಜ್ಯದಲ್ಲಿ ಇನ್ನೂ 15 ತಿಂಗಳಲ್ಲಿ 5 ಗ್ಯಾರಂಟಿಗಳೂ ಸ್ಥಗಿತವಾಗಲಿದೆ. ನನ್ನ ಮಗ ʻಪಂಚರತ್ನʼ ಕಾರ್ಯಕ್ರಮ ಇಟ್ಟುಕೊಂಡಿದ್ದ. ಗ್ಯಾರಂಟಿಗೂ ʻಪಂಚರತ್ನʼಕ್ಕೂ ಎಲ್ಲಿಯ ಸಂಬಂಧ? 5 ಗ್ಯಾರಂಟಿಯಲ್ಲಿ 1 ಗ್ಯಾರಂಟಿ ಮುಗಿದು ಹೋಗಿದೆ. ಗೃಹಲಕ್ಷ್ಮಿ ಹಣ ಈಗ ಚನ್ನಪಟ್ಟಣದ ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇವರಿಗೆ ತಿಂದು ತಿಂದು ತೇಗಿ ತೇಗಿ ಅಜೀರ್ಣ ಆಗಿದೆ. ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ರು. ಈ ಸರ್ಕಾರ ತೆಗೆಯೋವರೆಗೂ ನಾನು ಮನೆಯಲ್ಲಿ ಮಲಗಲ್ಲ ಎಂದು ಶಪಥ ಮಾಡಿದರು.
ಇದನ್ನು ಓದಿ: ಬಿಗ್ಬಾಸ್ ಶೋ ನಿಷೇಧಕ್ಕೆ ಒತ್ತಾಯ..ಕನ್ನಡಿಗರಿಗೆ ಹೆಚ್ಚಿದ ಆತಂಕ!
ಕುಮಾರಸ್ವಾಮಿ ಮೇಲೆ ಕೇಸ್ ಹಾಕಿಸ್ತಾರೆ. ನಾನು ರೈತನ ಮಗನಾಗಿ ಹುಟ್ಟಿದ್ದೇನೆ. ಎಂತವರನ್ನ ಎದುರಿಸಿದ್ದೇನೆ. ಕುಮಾರಸ್ವಾಮಿ ಮೇಲೆ ಕೇಸ್ ಹಾಕ್ತಿರಾ. ಇದಕ್ಕೆ ನಾವು ಹೆದರೊಲ್ಲ. ನಾನು ಯಡಿಯೂರಪ್ಪ ಈ ಸರ್ಕಾರ ತೆಗೆಯೋವರೆಗೂ ನಿರಂತರವಾಗಿ ಕೆಲಸ ಮಾಡ್ತೀವಿ. ಸಾವಿರಾರು ಮಕ್ಕಳಿಗೆ ಕೆಲಸ ಕೊಡ್ತೀವಿ ಅಂತ ಕುಮಾರಸ್ವಾಮಿ ಜಾಗ ಕೇಳಿದ್ರೆ ಒಬ್ಬ ಮಂತ್ರಿ ಕೊಡೊಲ್ಲ ಅಂತಾನೆ. ಕುಮಾರಸ್ವಾಮಿ ತನ್ನ ಮಗನಿಗೆ ಜಾಗ ಕೇಳಿಲ್ಲ. ಜನರಿಗಾಗಿ ಕೇಳಿದರು, ಆದ್ರೂ ಕೊಡೊಲ್ಲ ಅಂತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಬಿಜೆಪಿ ಇರುವವರೆಗೂ ಮುಸ್ಲಿಂ ಮೀಸಲಾತಿ ಸಾಧ್ಯವಿಲ್ಲ: ಅಮಿತ್ ಶಾ
ನನ್ನ ಮೊಮ್ಮಗ ವಿಧಾನಸಭೆಗೆ ಆಯ್ಕೆ ಆಗೋದು ನೂರಕ್ಕೆ ನೂರು ಸತ್ಯ. ಸಿದ್ದರಾಮಯ್ಯ ನಿನ್ನನ್ನ ಹಣಕಾಸು ಮಂತ್ರಿ ಮಾಡಿದ್ದೆ. ಇವತ್ತು ಈ ರಾಜ್ಯವನ್ನು ಇಂತಹ ಪರಿಸ್ಥಿತಿಗೆ ತಂದಿದ್ದೀಯಪ್ಪ ನಿನಗೆ ನಮಸ್ಕಾರ. ಡಿಕೆಶಿ ಚುನಾವಣೆಗೆ ಜನರ ಹಣ ಕಳಿಸ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡ್ತೀನಿ. ಈ ಉಸಿರು ಇರೋವರೆಗೂ ನಾನು ಹೋರಾಟ ಮಾಡ್ತೀನಿ ಎಂದು ಗುಡುಗಿದರು.