ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮೇಶ್ವರಂ ಕೆಫೆಯಲ್ಲಿ ಎನ್ಐಎ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಯುತ್ತಿದೆ. ಎನ್ಐಎ ಅಧಿಕಾರಿಗಳು ಘಟನೆ ನಡೆದು ಐದು ತಿಂಗಳ ಬಳಿಕ ಆರೋಪಿ ಮುಸಾವಿರ್ನನ್ನು ಕರೆತಂದು ಸ್ಥಳ ಮಹಜರು ನಡೆಸುತ್ತಿದ್ದಾರೆ. ಹೀಗಾಗಿ ರಾಮೇಶ್ವರಂ ಕೆಫೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸ್ಥಳೀಯವಾಗಿ ವೈಟ್ ಫೀಲ್ಡ್ ವಿಭಾಗದ 50ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
NIA ಅಧಿಕಾರಿಗಳು 2-3 ಬಾರಿ ದೃಶ್ಯ ಮರು ಸೃಷ್ಟಿ ಮಾಡ್ತಿದ್ದಾರೆ. ಆರೋಪಿ ಮುಸಾವಿರ್, 3 ಬಾರಿ ನಡೆದುಕೊಂಡು ಬಂದು ಯಾವ ರೀತಿ ಕೃತ್ಯ ಎಸಗಲಾಗಿತ್ತು ಎಂದು ತೋರಿಸಿದ್ದಾನೆ. ಕ್ಯಾಪ್, ಕನ್ನಡಕ, ಬ್ಯಾಗ್ ಹಾಕಿಕೊಂಡು ಅವತ್ತು ಹೇಗೆ ಬಂದಿದ್ದ ಅದೇ ರೀತಿ ನಡೆದುಕೊಂಡು ಬಂದು ತೋರಿಸಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾನೆ. ರಾಮೇಶ್ವರಂ ಕೆಫೆಗೆ ಹೇಗೆ ಬಂದಿದ್ದ ಆ ರೀತಿ ದೃಶ್ಯ ಮರುಸೃಷ್ಟಿ ಮಾಡಲಾಗಿದೆ. ಅವತ್ತಿನ ರೀತಿ ಬ್ಲ್ಯಾಕ್ ಬ್ಯಾಗ್, ಟೋಪಿ ಹಾಕಿಸಿ ಸ್ಥಳ ಮಹಜರು ಮಾಡಲಾಗುತ್ತಿದೆ. ಬಾಂಬ್ ಇಟ್ಟಿದ್ದ ಸ್ಥಳ, ಕುಳಿತಿದ್ದ ಸ್ಥಳ ತೋರಿಸಿದ್ದಾನೆ. ಈ ಎಲ್ಲವನ್ನೂ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡ್ತಿದ್ದಾರೆ.
ರಾಷ್ಟ್ರೀಯ ತನಿಖಾ ದಳ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಮಾ.1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಏಪ್ರಿಲ್ 12ರಂದು ಪ್ರಮುಖ ಆರೋಪಿಗಳನ್ನು NIA ಬಂಧಿಸಿತ್ತು. ಅಬ್ದುಲ್ ಮತೀನ್, ಮುಸಾವಿರ್ ಹುಸೇನ್ ಬಂಧತ ಆರೋಪಿಗಳು.