ಮೂಲಭೂತ ಸೌಕರ್ಯ ವಿಚಾರದಲ್ಲಿ ಮೋದಿ ಸರ್ಕಾರದ ಕೆಲಸಕ್ಕೆ ನಟಿ ರಶ್ಮಿಕಾ ಮಂದಣ್ಣ ಮೆಚ್ಚುಗೆ ಸೂಚಿಸಿದ್ದರು. ರಶ್ಮಿಕಾ ಮಾಡಿದ್ದ ಟ್ವಿಟ್ ಗೆ ಮೋದಿ ಕೂಡ ರಿಯಾಕ್ಟ್ ಮಾಡಿದ್ರು. ಯಾವಾಗ ಮೋದಿ ರಿಯಾಕ್ಟ್ ಮಾಡಿದ್ರೋ ಆಗ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು, ರಶ್ಮಿಕಾ ಮೇಲೆ ಗರಂ ಆಗಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ ಅಂಜಲಿ ನಿಂಬಾಳ್ಕರ್ ಬುಲೆಟ್ ರೈಲಿನ ಬಗ್ಗೆ ಏನಾದರೂ ಹೇಳಲು ಇದ್ಯಾ, ಮುಂಬೈ – ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆ ದುರಂತ. ಬೂಟ್ ನೆಕ್ಕುವುದನ್ನ ನಿಲ್ಲಿಸಿ. ಮೆಗಾಸ್ಟಾರ್ ಮಾಡಲು ಇದು ನಿಮಗೆ ಸಹಾಯ ಮಾಡುವುದಿಲ್ಲ ಅಂತ ಟ್ವಿಟ್ ಮಾಡಿದ್ದಾರೆ.
ಅಟಲ್ ಸೇತು ಬಗ್ಗೆ ನಟಿ ಹೆಮ್ಮೆಯ ಮಾತುಗಳನ್ನಾಡಿರುವ ವೀಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಮೋದಿ, ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದೇನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.