- 103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಖಚಿತ
- ತೆಲುಗು ನಟಿ ಹೇಮಾ ರಿಪೋರ್ಟ್ ಕೂಡ ಪಾಸಿಟಿವ್
- ಪಾಸಿಟಿವ್ ಬಂದವರಿಗೆ ಸಿಸಿಬಿಯಿಂದ ನೋಟೀಸ್ ನೀಡಿ ವಿಚಾರಣೆ
ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ರೇವ್ ಪಾರ್ಟಿ ಭಾಗಿಯಾಗಿದ್ದ ಬಹುತೇಕರು ಡ್ರಗ್ಸ್ ಸೇವಿಸಿದ್ರು ಎಂಬ ವಿಚಾರವಾಗಿ ಪಾರ್ಟಿ ಯಲ್ಲಿ ಭಾಗಿಯಾಗಿದ್ದವರ ರಕ್ತ ಪರೀಕ್ಷೆ ಮಾಡಲಾಗಿತ್ತು. ಇದೀಗ ಅದರ ರಿಸಲ್ಟ್ ಬಂದಿದ್ದು, 103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರೋದು ಖಚಿತವಾಗಿದೆ. 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಹಾಗೂ 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ.
ಇನ್ನುಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ಮಾದಕ ವಸ್ತು ತೆಗೆದು ಕೊಂಡಿರುವುದು ಬ್ಲಡ್ ರಿಪೋರ್ಟ್ ನಲ್ಲಿ ಸಾಬೀತಾಗಿದೆ.
ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆಯಾಗಿದ್ದು, ರೇವ್ ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್, ಹೈಡ್ರೋಗಾಂಜಾ ಪತ್ತೆಯಾಗಿತ್ತು.. ಅಂದಹಾಗೆ ಇದು ವಾಸು ಎಂಬಾತನ ಬರ್ತ್ ಡೇ ಅಂಗವಾಗಿ ಆಯೋಜನೆಯಾಗಿದ್ದ ಪಾರ್ಟಿ ಆಗಿತ್ತಂತೆ. ಇನ್ನು ಬ್ಲಡ್ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದವರಿಗೆ ಸದ್ಯದಲ್ಲೆ ಸಿಸಿಬಿಯಿಂದ ನೋಟೀಸ್ ನೀಡಿ ವಿಚಾರಣೆ ಮಾಡಲಿದ್ದಾರೆ. ಒಟ್ನಲ್ಲಿ ಪಾರ್ಟಿಯಲ್ಲಿ ಡ್ರಗ್ ಸೇವನೆ ಮಾಡಿದವರಿಗೆ ಸಂಕಷ್ಟ ತಪ್ಪಿದಲ್ಲ.