ಜಿಆರ್ ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಅವರ ಹೆಸರು ಕೂಡ ಕೇಳಿಬಂದಿತ್ತು. ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಸ್ವತಃ ನಟಿ ಹೇಮಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರೋ ನಟಿ ಹೇಮಾ ಇದೆಲ್ಲಾ ಸುಳ್ಳು ಸುದ್ದಿ ಅಂತ ಹೇಳಿದ್ದಾರೆ.
ಬರ್ತ್ಡೇ ಹೆಸರಿನಲ್ಲಿ ಜಿಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿದ್ರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ದಾಳಿ ವೇಳೆ ಡ್ರಗ್ ಪೆಡ್ಲರ್, ಪಾರ್ಟಿ ಆಯೋಜಕ ವಾಸು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಬಂಧನ ವೇಳೆ ಈ ಪಾರ್ಟಿಯಲ್ಲಿ ತೆಲುಗು ಕಿರುತೆರೆ ನಟಿಯರು, ಮಾಡೆಲ್ಗಳೂ ಭಾಗಿಯಾಗಿದ್ದರು. ಜೊತೆಗೆ ನಟಿ ಹೇಮಾ ಹೆಸರು ಕೂಡ ಹರಿದಾಡಿತ್ತು. ಇದೇ ವಿಚಾರವಾಗಿ ಹೇಮಾ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಾನು ಎಲ್ಲೂ ಹೋಗಿಲ್ಲ. ನಾನು ಹೈದರಾಬಾದ್ನಲ್ಲೇ ಇದ್ದೇನೆ. ಫಾರ್ಮ್ಹೌಸ್ನಲ್ಲಿ ಎಂಜಾಯ್ ಮಾಡ್ತಿದ್ದೇನೆ. ನನ್ನ ಬಗ್ಗೆ ಬರ್ತಿರೋದು ಸುಳ್ಳು ಸುದ್ದಿ. ಅಲ್ಲಿ ಯಾರಿದ್ದಾರೋ ಏನೋ ಗೊತ್ತಿಲ್ಲ. ಇದೆಲ್ಲ ಫೇಕ್ ನ್ಯೂಸ್. ಅದೆಲ್ಲ ನಂಬಬೇಡಿ’’ ಎಂದು ನಟಿ ಹೇಮಾ ಸ್ಪಷ್ಟನೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ಹೈದರಾಬಾದ್ನಲ್ಲೇ ಇದ್ದೀನಿ. ಇನ್ನೂ ಒಂದು ವಾರ ಇಲ್ಲೇ ಇರ್ತೀನಿ. ಬಹುಶಃ ಅಲ್ಲಿ ಯಾರೋ ಬೇರೆ ಹೇಮಾ ಇರಬಹುದು. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ನಾನು ಅಂದ್ಕೊಂಡಿರಬೇಕು. ಬಟ್ ನಾನು ಅಲ್ಲಿ ಇಲ್ಲ. ಮಾಧ್ಯಮಗಳಲ್ಲಿ ಸುದ್ದಿ ನೋಡಿದ್ಮೇಲೆ ನನಗೆ ಗೊತ್ತಾಗಿದ್ದು. ನಾನು ಹೈದರಾಬಾದ್ನಲ್ಲಿ ಎಂಜಾಯ್ ಮಾಡ್ತಿದ್ದೀನಿ ಎಂದು ನಟಿ ಹೇಮಾ ಸ್ಪಷ್ಟನೆ ನೀಡಿದ್ದಾರೆ