90ರ ದಶಕದ ಕಿರುತೆರೆಯ ಸೆನ್ಸಾಷನ್ ಸಿಲ್ಲಿ ಲಲ್ಲಿ ಸೀರಿಯಲ್ ನ, ಡಾ. ವಿಠ್ಠಲ್ ರಾವ್ ಖ್ಯಾತಿಯ ನಟ ರವಿಶಂಕರ್ ಗೌಡ ಸದ್ಯ ಹಿರಿತೆರೆಯಲ್ಲಿ ತುಂಬಾನೇ ಬ್ಯುಸಿ ಈ ಬ್ಯುಸಿ ಷೆಡ್ಯೂಲ್ ನ ಮಧ್ಯೆ ಕಿರುತೆರೆಗೆ ರೀ-ಎಂಟ್ರಿ ಕೊಟ್ಟಿದಾರೆ. ಈ ಬಾರಿ ಸ್ಟಾರ್ ಸುವರ್ಣ ವಾಹಿನಿಯ ಶೋ ನ ಆಂಕರ್ ಆಗುವ ಮೂಲಕ ಕಿರುತೆರೆಗೆ ವಾಪಸ್ಸಾಗಿದ್ದಾರೆ.
ನಟನೆ ಜೊತೆ ಸಿಂಗಿಂಗ್, ಡಬ್ಬಿಂಗ್ ಹಾಗೂ ನಿರೂಪಣೆಯಲ್ಲೂ ತಮ್ಮ ಅಚ್ಚು ಹೊತ್ತಿದ್ದ ರವಿಶಂಕರ್ ಈಗ ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಗೃಹಮಂತ್ರಿ ಕಾರ್ಯಕ್ರಮದ ನಿರೂಪಕರಾಗಿ ಹೊಸ ರೂಪದಲ್ಲಿ ಮಿಂಚಾಲಿದ್ದಾರೆ. ರವಿಶಂಕರ್ ಗೌಡ ಕೆಲವು ವರ್ಷಗಳ ಹಿಂದೆ ಉದಯ ಟಿವಿಯ ಕಾರ್ಯಕ್ರಮದ ನಿರೂಪಕರಾಗಿ ಮೆಚ್ಚುಗೆ ಗಳಿಸಿದ್ದರು ನಂತ್ರ ಮಜಾ ಟಾಕೀಸ್ ನಲ್ಲೂ ತಮ್ಮ ಮಾತಿನ ಕರಾಮತ್ತು ತೋರಿಸಿದ್ರು.
ಈಗ ಕರ್ನಾಟಕದ ಮನೆಮನೆಗೆ ಭೇಟಿ ಕೊಟ್ಟು, ಮನೆಯೊಡತಿಯರನ್ನ ಗೃಹಮಂತ್ರಿ ಮಾಡಲಿದ್ದಾರೆ. ರವಿಶಂಕರ್ ಗೌಡ ಸುವರ್ಣ ಗೃಹಮಂತ್ರಿ ಕಾರ್ಯಕ್ರಮ ನಡೆಸಿಕೊಡಲಿದ್ದು, ಸೋಮವಾರದಿಂದ ಶನಿವಾರದವರೆಗೆ ಪ್ರತಿ ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.