ಯಾರೇ ನೀನು ಚೆಲುವೆ ಸಿನಿಮಾ ಮೂಲಕ ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಮೋಡಿ ಮಾಡಿದ ಚೆಲುವೆ ಸಂಗೀತ ಈಗ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ? ಮತ್ತೆ ಕನ್ನಡ ಸಿನಿಮಾಕ್ಕೆ ಬರ್ತಾರ? ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..
ಯಾರೇ ನೀನು ಚೆಲುವೆ ಸಿನಿಮಾ ಯಾರಿಗೆ ತಾನೇ ನೆನಪಿರಲ್ಲ ಹೇಳಿ.. ಖಂಡಿತಾ ನೆನಪಿರುತ್ತೆ. ಯಾಕಂದ್ರೆ ಈ ಸಿನಿಮಾದಲ್ಲಿ ಅದ್ಭುತ ಕಥೆ ಹಾಗು ಹಾಡಿನ ಮೂಲಕ ಕರುನಾಡಿನ ಮನಸ್ಸು ಗೆದ್ದಂತಹ ಸಿನಿಮಾ ಇದು. ಈ ಸಿನಿಮಾದ ಪ್ರತಿಯೊಂದು ಪಾತ್ರಗಳು, ಹಾಡುಗಳು, ಕ್ಲೈಮ್ಯಾಕ್ಸ್ ಎಲ್ಲವೂ ಇಂದಿಗೂ ಜೀವಂತ ಎಂದೆಂದಿಗೂ ಜೀವಂತ.
ಅದರಲ್ಲೂ ಕುಶಲವೇ ಕ್ಷೇಮವೇ ಹಾಡನ್ನು ಇವತ್ತಿಗೂ ಜನ ತಮ್ಮ ಪ್ರೀತಿಯಾ ಹುಡುಗ ಅಥವ ಹುಡುಗಿಯನ್ನು ನೆನಪಿಸಿಕೊಂಡು ಹಾಡುತ್ತಾರೆ. ಇದರ ಜೊತೆಗೆ ಸಿನಿಮಾ ನಾಯಕಿ ಕಮಲಿ ಪಾತ್ರದಲ್ಲಿ ಮಿಂಚಿದ ಸಂಗೀತ ಮಾಧವ ನಾಯರ್ ರನ್ನು ಇಂದಿಗೂ ನಮ್ಮ ಕನ್ನಡಿಗರು ಕಮಲಿ ಅಂತಾನೇ ನೆನಪಿಟ್ಟುಕೊಂಡಿರುವುದು ಅಚ್ಚರಿಯ ವಿಷಯವೇನಲ್ಲ. ಅಷ್ಟೊಂದು ಅದ್ಭುತವಾಗಿ, ಮನಮೋಹಕವಾಗಿ ನಟಿಸಿದಂತಹ ಸಿನಿಮಾ.
ಕರ್ನಾಟಕದ ಕನಸುಗಾರ ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾ ಮೂಲಕ ಕನ್ನಡಕ್ಕೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟ ಸಂಗೀತ, ನಂತರ ರವಿಚಂದ್ರನ್ ಅವರ ಸಿನಿಮಾಗೆ ನಾಯಕಿಯಾಗಿ ಯಾರೇ ನೀನು ಚೆಲುವೆ ಸಿನಿಮಾದಲ್ಲಿ ಸಂಗೀತಾ ಅಭಿನಯಿಸಿದ್ದರು. ನಂತರ ಶಿವರಾಜ್ ಕುಮಾರ್ ಜೊತೆ ಯಾರೆ ನೀ ಅಭಿಮಾನಿ ಸಿನಿಮಾದಲ್ಲೂ ಸಹ ಕರ್ನಾಟಕದ ಜನರಿಗೆ ಮನಮೆಚ್ಚುವಂತೆ ನಟಿಸಿ ಪ್ರೀತಿಗೆ ಪಾತ್ರರಾಗಿದ್ದರು.
ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ ನಂತರ ನಟಿ ಮತ್ತೆ ಕನ್ನಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 1978 ರಿಂದ 2000ದ ವರೆಗೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದ ಸಂಗೀತಾ, ನಂತರ ಸಿನಿಮಾಟಗ್ರಾಫರ್ ಎಸ್ ಸರವಣನ್ ಅವರನ್ನು ವಿವಾಹವಾಗಿ ಸಿನಿಮಾದಿಂದ ದೂರ ಉಳಿದಿದ್ದರು.
ಇದೀಗ ಮತ್ತೆ ಮಲಯಾಲಂ ಸಿನಿಮಾಗೆ ಮರು ಪ್ರವೇಶ ಮಾಡಿದ್ದಾರೆ. ಮಲಯಾಲಂದಲ್ಲಿ ಕಳೆದ ವರ್ಷ ಚಾವೆರ್ ಹಾಗೂ ಈ ವರ್ಷ ಪರಾಕ್ರಮಮ್, ಆನಂದ್ ಶ್ರೀಬಾಲ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೊಗಳು ಸಖತ್ ವೈರಲ್ ಆಗುತ್ತಿವೆ.
ಕನ್ನಡಿಗರಂತೂ ಸಂಗೀತ ಮಾಧವ ನಾಯರ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿ, ಕುಶಲವೇ ಕ್ಷೇಮವೇ ಹಾಡನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಮಾಡುತ್ತಿದ್ದಾರೆ. ಮತ್ತೆ ಕನ್ನಡಕ್ಕೆ ಬರುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.