ರೈತರಿಗೆ ನೀಡುವ ಅಡಮಾನರಹಿತ ಕೃಷಿ ಸಾಲ ಮಿತಿಯನ್ನು 1.6 ಲಕ್ಷ ರುಪಾಯಿಂದ 2 ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ. ಆರ್ಬಿಐನ ಈ ನಿರ್ಧಾರದಿಂದ ಸಣ್ಣ ರೈತರಿಗೆ ಉಪಯೋಗವಾಗಲಿದೆ. ಇದೇ ವೇಳೆ, ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ ಠೇವಣಿಗಳಿಗೆ ಬಡ್ಡಿದರದ ಮಿತಿಯನ್ನು 200 ಮೂಲಾಂಕಗಳಷ್ಟು ಹೆಚ್ಚಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು 2 ಲಕ್ಷ ರುಪಾಯಿಗೆ ಏರಿಸಿದೆ. ಆರ್ಬಿಐನ ಮಾನಿಟರಿ ಪಾಲಿಸಿ ಸಮಿತಿಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ನಿರ್ಧಾರವನ್ನು ಪ್ರಕಟಿಸಿದರು.
ಸದ್ಯ ಅಡಮಾನರಹಿತ ಕೃಷಿ ಸಾಲದ ಮಿತಿ 1.6 ಲಕ್ಷ ರೂ ಇದೆ. ಇದನ್ನು 2ಲಕ್ಷ ರೂಗೆ ಏರಿಸಲಾಗಿದೆ. ಇದರ ಅರ್ಥ ರೈತರು ಯಾವುದೇ ಅಡಮಾನ ಇಡದೇ ಬ್ಯಾಂಕ್ನಲ್ಲಿ 2ಲಕ್ಷದವರೆಗೆ ಸಾಲವನ್ನ ಪಡೆಯಬಹುದಾಗಿದೆ. ಆರ್ಬಿಐ ನ ಈ ನಿರ್ಧಾರದಿಂದ ಸಣ್ಣ, ಅತಿಸಣ್ಣ ರೈತರಿಗೆ ಅನುಕೂಲವಾಗುತ್ತದೆ. ಹೀಗಾಗಿ ರೈತರು ಸಾಲ ಪಡೆದು ಕೃಷಿ ಚಟುವಟಿಕೆಗೆ ಬಳಸಬಹುದಾಗಿದೆ.
ಕೊನೆಯದಾಗಿ ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು ಪರಿಷ್ಕರಿಸಿದ್ದು 2019ರಲ್ಲಿ. ಅಲ್ಲಿಂದೀಚೆಗೆ ಮಿತಿ ಪರಿಷ್ಕರಿಸಲಾಗಿರಲಿಲ್ಲ. ಕೃಷಿ ವೆಚ್ಚದಲ್ಲಿ ಏರಿಕೆ ಆಗಿರುವುದು ಹಾಗು ಒಟ್ಟಾರೆ ಹಣದುಬ್ಬರ ಹೆಚ್ಚಳ ಆಗಿರುವುದನ್ನು ಪರಿಗಣಿಸಿ, ಅಡಮಾನರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂನಿಂದ 2 ಲಕ್ಷ ರೂಗೆ ಏರಿಸಲು ನಿರ್ಧಾರ ಮಾಡಲಾಗಿದೆ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೆಚ್ಚು ಸಾಲದ ಅವಕಾಶ ಸಿಗುತ್ತದೆಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.