ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ಗೆ ಪ್ರವೇಶಿಸಿದೆ.
ಆರ್ಸಿಬಿ 27 ರನ್ಗಳಿಂದ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇ ಆಫ್ನಲ್ಲಿ ಸ್ಥಾನ ಪಡೆದುಕೊಂಡಿತ್ತು. ಪ್ಲೇಆಫ್ ತಲುಪಲು ಆರ್ಸಿಬಿ ಸಿಎಸ್ಕೆ ವಿರುದ್ಧದ ಪಂದ್ಯವನ್ನು ಕನಿಷ್ಠ 18 ರನ್ ಅಥವಾ 11 ಎಸೆತಗಳಿಂದ ಗೆಲ್ಲಬೇಕಿತ್ತು. ಆದರೆ ಈ ಪಂದ್ಯವನ್ನು ಆರ್ಸಿಬಿ 27 ರನ್ಗಳಿಂದ ಗೆದ್ದುಕೊಂಡಿತ್ತು. ಪ್ಲೇ ಆಫ್ ತಲುಪಿದ ಸಂದರ್ಭ ತಂಡದ ಆಟಗಾರರು ಅದ್ದೂರಿಯಾಗಿ ಸಂಭ್ರಮಿಸಿದರು.