- ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಮುಂದಾದಿದ್ದ ದರ್ಶನ್ & ಗ್ಯಾಂಗ್
- ವೆಪನ್ ಗಳು, 30ಲಕ್ಷ ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹಾಗೂ ಅವರ ಗ್ಯಾಂಗ್ ಅನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ವಿಚಾರಣೆಗಾಗಿ 5 ದಿನ ಕಸ್ಟಡಿಗೆ ಕೊಡಲಾಗಿದೆ. ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಸಾಕ್ಷ್ಯ ನಾಶಕ್ಕೂ ಮುಂದಾಗಿರುವುದು ಗೊತ್ತಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಸಾಕ್ಷ್ಯನಾಶಕ್ಕೆ ಮುಂದಾಗಿದ್ದರು. ಆದರೆ ಪೊಲೀಸರು ಆರೋಪಿಗಳ ಬಳಿ ಇದ್ದ ಹತ್ತು ಮೊಬೈಲ್ ಗಳನ್ನ ಜಪ್ತಿ ಮಾಡಿದ್ದಾರೆ. ಹೀಗಾಗಿ ಮೊಬೈಲ್ ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿವೆ.
ದರ್ಶನ್ ವಿರುದ್ಧ ಮತ್ತಷ್ಟು ಆಧಾರಗಳು ಪತ್ತೆಯಾಗಿವೆ. ಜೊತೆಗೆ ಸ್ಥಳ ಮಹಜರು ವೇಳೆ ಮತ್ತಷ್ಟು ಸಾಕ್ಷ್ಯ ಸಿಕ್ಕಿವೆ. ವೆಪನ್ ಗಳು, 30ಲಕ್ಷ ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿಮಾಡಲಾಗಿದೆ. ಈಗಾಗಲೇ ಆರೋಪಿಗಳನ್ನ ವಿಚಾರಣೆ ಮಾಡಿದ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.