- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್
- ಪವನ್ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು
- ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಎಂದು ವಾರ್ನ್ ಮಾಡಿದೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ ಒಟ್ಟು 13 ಆರೋಪಿಗಳ ಬಂಧಿಸಲಾಗಿದೆ. ಬಂಧಿತರನ್ನು ತೀವ್ರ ತನಿಖೆಗೆ ಒಳಪಡಿಸಿರುವ ಪೊಲೀಸರಿಂದ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿವೆ.
ಕೊಲೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಕೋರ್ಟ್ಗೆ ಒಪ್ಪಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಈ ಅವಧಿಯಲ್ಲಿ ನಿನ್ನೆಯವರೆಗೆ ಸ್ಥಳ ಮಹಜರು ಸೇರಿದಂತೆ, ಇತರೆ ವಿಚಾರಣೆಗಳು ಪೂರ್ಣಗೊಂಡಿವೆ. ಸ್ಥಳ ಮಹಜರು ಬಳಿಕ ಆರೋಪಿಗಳ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಅಂತೆಯೇ ನಟ ದರ್ಶನ್ರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ.
ಕೊಲೆ ಪ್ರಕರಣದ ಎ2 ದರ್ಶನ್ ಹೇಳಿದ್ದೇನು..?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ಆಗಿರುವ ದರ್ಶನ್ ಅವರಿಂದಲೂ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪವನ್ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು. ಅದಕ್ಕೆ ರೇಣುಕಾಸ್ವಾಮಿಯನ್ನು ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದೆ. ಶನಿವಾರ ಸಂಜೆ ರೇಣುಕಾಸ್ವಾಮಿಯನ್ನು ಶೆಡ್ನಲ್ಲಿ ಭೇಟಿಯಾದೆ. ಇನ್ನೊಂದು ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಎಂದು ವಾರ್ನ್ ಮಾಡಿದೆ. ದುಡ್ಡು ಕೊಟ್ಟು ಊಟ ಮಾಡ್ಕೊಂಡು ಊರು ಸೇರುವಂತೆ ಹೇಳಿ ಹೊರಟು ಹೋದೆ. ನಾನು ಈ ಕೊಲೆಯನ್ನು ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ.