- ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 11 ವಿಷಯಗಳ ಬಗ್ಗೆ ಚರ್ಚೆ
- ದರ್ಶನ್ ಪ್ರಕರಣದಲ್ಲಿ ಆರೋಪ ಬಂದ ಮೇಲೆ ಆರೋಪಿತರೇ
ವಿಧಾನಸೌಧದಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 11 ವಿಷಯಗಳ ಬಗ್ಗೆ ಚರ್ಚೆಯಾಯ್ತು ಅದರ ಜೊತೆಗೆ ನಟ ದರ್ಶನ್ ಕೊಲೆ ಪ್ರಕರಣ ಕೂಡ ಚರ್ಚೆಯಾಗಿದೆ. ಈ ಪ್ರಕರಣದ ಸಂಬಂಧ ಆರೋಪಿಗಳ ವಿಚಾರಣೆಗಾಗಿ ಅನ್ನಪೂರ್ಣೇಶ್ವರಿ ಠಾಣೆಗೆ ಪೆಂಡಾಲ್ ಹಾಕಿದ ವಿಚಾರವಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಠಾಣೆಯ ಸುತ್ತ 144 ಸೆಕ್ಷನ್ ಹಾಕಿರ್ತಾರೆ. ಬ್ಯಾರಿಕೇಡ್ ಹಾಕಿದಂತೆ ಪೆಂಡಾಲ್ ಹಾಕಿರಬಹುದು. ನೀವು ಬರಬಾರದು ಅಂತಾ ಬ್ಯಾರಿಕೇಡ್ ಹಾಕ್ತಾರೆ. ಶಾಮಿಯಾನ ಹಾಕಿರೋದು ನನಗೆ ಮಾಹಿತಿ ಇಲ್ಲ. ನೋಡಿ ಮಾತನಾಡಬೇಕು. ಈ ಪ್ರಕರಣದಲ್ಲಿ ಆರೋಪ ಬಂದ ಮೇಲೆ ಆರೋಪಿತರೇ. ಯಾವುದೇ ರೀತಿ ಅನುಕೂಲತೆ ಸೃಷ್ಟಿ ಮಾಡುವಂತಿಲ್ಲ.ಅಂತಹ ಅವಕಾಶ ನಮ್ಮಸರ್ಕಾರ ಮಾಡಿಕೊಡಲ್ಲ ಎಂದು ಕಾನೂನು ಹೆಚ್.ಕೆ ಪಾಟೀಲ್ ತಿಳಿಸಿದರು.