ರೇಣುಕಾಸ್ವಾಮಿ ಶವ ಪೋಸ್ಟ್ ಮಾರ್ಟಮ್ ಮಾಡಿಸಿದ ವೈದ್ಯರು ದರ್ಶನ್ ಹಾಗೂ ಪವಿತ್ರ ಗೌಡ ಅವರನ್ನ ಇತ್ತಿಚೇಗಷ್ಟೆ ಜೈಲಿನಲ್ಲಿ ಭೇಟಿ ಮಾಡಿದ್ದ, ಪವಿತ್ರ ಆಪ್ತೆ ಸಮತ ಅವರ ಪತಿ ಎನ್ನುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪವಿತ್ರ ಗೌಡ ಸ್ನೇಹಿತೆ ಸಮತ. ಕೊಲೆ ಕೇಸ್ನಲ್ಲಿ ಜೈಲು ಪಾಲಗಿರುವ ಪವಿತ್ರ ಗೌಡ ಮತ್ತು ದರ್ಶನ್ ಅವರನ್ನ ಭೇಟಿ ಮಾಡಿ, ಮಾತುಕತೆ ನಡೆಸಿದ್ದಳು. ಸಮತಳ ಜೈಲು ಭೇಟಿಯಿಂದ ತನಿಖಾಧಿಕಾರಿಗೆ ಅನುಮಾನ ಮೂಡಿತ್ತು. ಡೌಟ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ನೋಟಿಸ್ ನೀಡಿದ್ದರು. ಈ ವೇಳೆ ಒಂದು ಮಾಹಿತಿ ಪೊಲೀಸರಿಗೆ ದೊರೆತಿದೆ.
ರೇಣುಕಾಸ್ವಾಮಿ ಪೋಸ್ಟ್ಮಾರ್ಟಮ್ ಮಾಡಿದ್ದೇ ಸಮತಳ ಪತಿ. ಡಾ. ಸುರೇಶ್ ಅವರಿಂದ ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ನಡೆದಿತ್ತು. ಆ ಮರಣೋತ್ತರ ಪರೀಕ್ಷೆ ಪೊಲೀಸರ ಕೈ ಸೇರುವ ಮೊದಲೇ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರ ಗೌಡರನ್ನು ಸಮತ ಭೇಟಿ ಮಾಡಿದ್ದಳು. ರೇಣುಕಾ ಸ್ವಾಮಿ ಶವ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ, ತಮ್ಮ ಡ್ಯೂಟಿಗೆ ರಜೆ ಇದ್ದರೂ ಸುರೇಶ್ ಕರ್ತವ್ಯಕ್ಕೆ ಹಾಜರಾಗಿದ್ದರು. ತಾನೇ ಖುದ್ದು ಮುಂದೆ ನಿಂತು ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು.
ಪವಿತ್ರ ಗೌಡ ಆಪ್ತ ಸ್ನೇಹಿತೆ ಪತಿಯಾಗಿರುವ ಕಾರಣ ಮರಣೋತ್ತರ ಪರೀಕ್ಷೆ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ. ಪರಿಶೀಲನೆ ನಡೆಸಿ ಡಾ. ಪ್ರದೀಪ್ ಎಂಬ ವೈದ್ಯರಿಂದ ಪೊಲೀಸರಿಗೆ ಮತ್ತೆ ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ ಮಾಡಲಾಗುತ್ತಿದೆ.