ಮೈಸೂರು: ಬೀದರ್ ಎಟಿಎಂ ಹಣ ದರೋಡೆ ಹಾಗೂ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ. ಈ ಬಾರಿ ದರೋಡೆಕೋರರು ಹಾಡಹಗಲೇ ಹಣ ಕದಿಯಲು ರೋಡ್ಗೆ ಇಳಿದಿದ್ದು, ಇನ್ನೋವಾ ಕಾರು ಅಡ್ಡಗಟ್ಟಿ ಹಣ ಹಾಗೂ ಕಾರಿನ ಸಮೇತ ಎಸ್ಕೇಪ್ ಆಗಿದ್ದಾರೆ.
ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಘಟನೆ ನಡೆದಿದೆ. 2 ಕಾರಿನಲ್ಲಿ ಬಂದಿದ್ದ ದರೋಡೆಕೋರರು ಇನ್ನೋವಾ ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ದಾಳಿ ಮಾಡಿ ಮುಸುಕುಧಾರಿಗಳು ಕಾರಿನಲ್ಲಿದ್ದ ವ್ಯಕ್ತಿಯ ಹಣ ಹಾಗೂ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಇನ್ನೋವಾ ಕಾರು ಅಡ್ಡಗಟ್ಟಿ ಹಣ ಕಿತ್ತುಕೊಂಡು ಹೋದ ದೃಶ್ಯ ಸೆರೆಯಾಗಿದ್ದ, ದೃಶ್ಯದಲ್ಲಿ 4 ದರೋಡೆಕೋರರು ಇನ್ನೋವಾ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಕಾಲಿನಲ್ಲಿದ್ದವರ ಕಣ್ಣಿಗೆ ಸ್ಪ್ರೇ ಮಾಡಿ ಕಾರು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
ಕೇರಳ ಮೂಲದ ಸೂಫಿ ಮತ್ತು ಅಶ್ರಫ್ ಎಂಬುವವರು ಮೈಸೂರಿಗೆ ಬಂದಿದ್ದರು. ಕೇರಳದ ಕೋಚಿಕೋಡಿನಿಂದ ಈ ಇಬ್ಬರು ಮೈಸೂರಿಗೆ ಜಮೀನು ಖರೀದಿಗೆ ಆಗಮಿಸಿದ್ದು, ಜಮೀನು ನೋಡಿಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಅಪರಿಚಿತರು ಎರಡು ಕಾರಗಳಲ್ಲಿ ಬಂದು ಕಾರು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಜಯಪುರ ಪೊಲೀಸರು ಕೃತ್ಯದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ಲ್ಯಾಬ್ ಸಿಬ್ಬಂದಿ ಗಾಜಿನ ತುಂಡು, ರಕ್ತದ ಕಲೆಯ ಮಾದರಿ ಸಂಗ್ರಹ ಮಾಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ; https://whatsapp.com/channel/0029VafyCqRFnSzHn1JWKi1B