ಕೆಜಿಎಫ್-2 ಸಿನಿಮಾ ಬಳಿಕ ಟಾಕ್ಸಿಕ್ ಚಿತ್ರದ ಮೂಲಕ ತೆರೆ ಮೇಲೆ ಅಬ್ಬರಿಸಲು ರಾಕಿಂಗ್ ಸ್ಟಾರ್ ಯಶ್ ಭರ್ಜರಿ ತಯಾರಿ ನಡೆಸಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಯಶ್ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಟಾಕ್ಸಿಕ್ ಸಿನಿಮಾ ಬಗ್ಗೆ ಹಾಗೂ ಚಿತ್ರದ ಡೈರೆಕ್ಟರ್ ಗೀತು ಮೋಹನ್ ದಾಸ್ ಬಗ್ಗೆ ಮಾತನಾಡುತ್ತಾ, ಅವರು Right Vision & Right Passion ನಿಂದ ಬಂದಿದ್ದಾರೆ. ನಾನು ಅವರ ಯಾವುದೇ ಸಿನಿಮಾ ನೋಡಿಲ್ಲ, ಕಥೆ ಹೇಳಬೇಕು ಅಂದರೆ ಅದ್ಭುತವಾಗಿಯೇ ಹೇಳಬೇಕು. ಅದನ್ನ ಯಶಸ್ವಿಯಾಗಿ ಮಾಡಿದ್ದಾರೆ ಗೀತು ಮೋಹನ್ ದಾಸ್ ಎಂದರು ಯಶ್.
ಗೀತು ಮೋಹನ್ ದಾಸ್ ಅವರ ಹಿಂದಿನ ಸಿನಿಮಾಗಳಿಗೂ ಈ ಸಿನಿಮಾಗೂ ತುಂಬಾ ವ್ಯತ್ಯಾಸವಿದೆ. ನಾನು ಯಾರ ಮಾತನ್ನೂ ಕೇಳುವುದಿಲ್ಲ, ನನ್ನ ಮಸಸ್ಸು ಏನು ಹೇಳುತ್ತೋ ಅದನ್ನೇ ನಾನು ಕೇಳುತ್ತೇನೆ. ಆದರಿಂದ ಅವರ ಕಾನ್ಸೆಪ್ಟ್ ಇಷ್ಟ ಆಯ್ತು. ಸಕ್ಸಸ್ನ ಎಂಜಾಯ್ ಮಾಡೋ ಕೆಟಗರಿಗೆ ಸೇರಿದವನಲ್ಲ ನಾನು, ಗೊತ್ತಿಲ್ಲದೆ ಇರೋದನ್ನ ಚೇಸ್ ಮಾಡ್ತಾ ಸಾಧಿಸೋದನ್ನು ಏಂಜಾಯ್ ಮಾಡ್ತೀನಿ ಎಂದು ತಮ್ಮ ಕಾರ್ಯ ವೈಖರಿಯನ್ನ ಬಿಚ್ಚಿಟ್ಟಿದ್ದಾರೆ ಯಶ್.
ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗ ಕರೋಡ್ ಪತಿಯಲ್ಲಿ ಕ್ವಿಟ್ ಮಾಡ್ತೀರಾ ಅಥವಾ ರಿಸ್ಕ್ ತಗೋತಿರಾ ಅಂದರೆ ರಿಸ್ಕ್ ತಗೋಳೋ ವ್ಯಕ್ತಿ ನಾನು. ಎಲ್ಲರೂ ಶೂಟಿಂಗ್ ಶುರು ಮಾಡಿದ ಮೊದಲ ದಿನ ಖುಷಿ ಪಡ್ತಾರೆ, ನಾನು ರಿಲೀಸ್ ದಿನ ಖುಷಿ ಪಡ್ತೀನಿ. ರಿಸ್ಕ್ ತಗೋಳೋಕೆ ನನಗೆ ಇಷ್ಟ ಅಂತ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಇದನ್ನೂ ಓದಿ: ನಾನೇ ರಾವಣ.. ನಂದೇ ನಿರ್ಮಾಣ.. ಯಶ್ ರಾಮಾಯಣ ದರ್ಶನಂ!
ಈಗಾಗಲೇ 30 ದಿನದ ಟಾಕ್ಸಿಕ್ ಶೂಟಿಂಗ್ ಮುಗಿದಿದೆ. ಡೈರೆಕ್ಟರ್ ಗೀತು ಮೋಹನದಾಸ್ ಅವರಿಗೆ ಪ್ರೇಕ್ಷಕರ ನಾಡಿ ಮಿಡಿತ ಹಾಗೂ ಮಾಸ್ ಪಲ್ಸ್ ಗೊತ್ತಿದೆ. ಅದನ್ನ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಮಾಸ್ ಮತ್ತು ಎಂಟರ್ಟೈನ್ಮೆಂಟ್ ಹೀಗೆ ಎರಡೂ ಗೊತ್ತಿದೆ. ಹಾಗಾಗಿಯೇ ಟಾಕ್ಸಿಕ್ ಚಿತ್ರದಲ್ಲಿ ಮಾಸ್ ಮತ್ತು ಎಂಟರ್ಟೈನ್ಮೆಂಟ್ ಎರಡೂ ಇರುತ್ತದೆ. ನಿರ್ದೇಶಕರೂ ಕೂಡ ಅದನ್ನೆ ವಿಶೇಷವಾಗಿಯೇ ಬೆಳ್ಳಿ ತೆರೆ ಮೇಲೆ ತರೋಕೆ ಪ್ಲಾನ್ ಮಾಡಿದ್ದಾರೆ.
ಟಾಕ್ಸಿಕ್ ಸಿನಿಮಾ ಹೆಸರು ಮತ್ತು ಟ್ಯಾಗ್ ಲೈನ್ ನಾನೇ ಇಟ್ಟಿದ್ದು. ನಾವೆಲ್ಲಾ Toxic ಸಂದರ್ಭದಲ್ಲಿದ್ದೀವಿ. ಈ ಸಿನಿಮಾದಲ್ಲಿ ತುಂಬಾ ಮಹಿಳಾ ಮತ್ತು ಸ್ಟ್ರಾಂಗ್ ಕ್ಯಾರೆಕ್ಟರ್ಗಳು ಇವೆ. ಅಧಿಕೃತವಾಗಿ ಅನೌನ್ಸ್ ಮಾಡ್ತೀವಿ. ಈ ಸಿನಿಮಾದಲ್ಲಿ ತುಂಬಾ ದೊಡ್ಡ ದೊಡ್ಡ ಸ್ಟಾರ್ಗಳೇ ನಟಿಸಿದ್ದಾರೆ ಸಮಯ ಬಂದಾಗ ಹೇಳತ್ತೇವೆ. ನಾನು ಹೇಗೆ ಕಾಣಿಸಬೇಕು ಎನ್ನುವುದಕ್ಕಿಂತ ಏಕೆ ಕಾಣಿಸಿಕೊಳ್ಳಬೇಕು ಎಂಬುದು ಮುಖ್ಯವಾಗುತ್ತೆ ಎಂದರು ರಾಕಿ ಭಾಯ್ ಯಶ್.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಅಬ್ಬರ ನೋಡಲು ಕಾಯ್ತಿದ್ದಾರೆ ಯಶ್ ಫ್ಯಾನ್ಸ್!
ಪ್ರಶಾಂತ್ ನೀಲ್ ಇರಬಹುದು , ಗೀತು ಮೋಹನ್ ದಾಸ್ ಇರಬಹುದು, ಡೈರೆಕ್ಟರ್ ಜೊತೆ ಹೆಚ್ಚು ಸಮಯ ಕಳೆಯಬೇಕು. ಆಗಲೇ ಸೆಟ್ಗೆ ಹೋದಾಗ ಕ್ಲಾರಿಟಿ ಸಿಗೋದು. ನಾನು ವರ್ಕ್ ಶಾಪ್ ಮಾಡಲ್ಲ , ಏಕೆಂದರೇ ನಾನು ಥೀಯೇಟರ್ ಆರ್ಟಿಸ್ಟ್. ಪಾತ್ರವನ್ನ ಅರ್ಥ ಮಾಡಿಕೊಂಡು ಅಭಿನಯಿಸುವುದೇ ಅ್ಯಾಕ್ಟಿಂಗ್ ಎಂದರು.
ಟಾಕ್ಸಿಕ್ ಸಿನಿಮಾದಲ್ಲಿ ಡೈರೆಕ್ಟರ್ ಗೀತು ಮೊಹನ್ ದಾಸ್, ಡಿಒಪಿ ರಾಜೀವ್ ರವಿ, ನಾಯಕನಾಗಿ ನೀವು, ಮೂವರೂ ಕೂಡ ಹೆಸರು ಮಾಡಿರೋರೆ ಆಗಿದ್ದೀರಿ, ನಿಮ್ಮಲ್ಲಿ ಬಾಸ್ ಯಾರು ಎಂದು ಪ್ರಶ್ನಿಸಿದ್ದಕ್ಕೆ, “Script is the Boss” ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ನನ್ನ ಡೈರೆಕ್ಟರ್ ಮತ್ತು DOP ನೇ ನನ್ನ ಮೊದಲ ಆಡಿಯನ್ಸ್. ಅವರ ಮುಖದಲ್ಲಿ ನಗು ಮತ್ತು ತೃಪ್ತಿ ಇಲ್ಲ ಅಂದ್ರೆ ಹೇಗೆ..? ನಾನು ಸಿನಿಮಾ ವಿಚಾರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಮಾತನ್ನ ಕೂಡಾ ಕೇಳುತ್ತೇನೆ. ತಪ್ಪಿದ್ರೆ ತಿದ್ದಿಕೊಂಡು ಕೆಲಸ ಮಾಡುತ್ತೇನೆ. ಇಡೀ ವಿಶ್ವವೇ ತಿರುಗಿ ನೋಡುವಂತಹ ಕಮರ್ಷಿಯಲ್ ಮಾಸ್ ಎಂಟರ್ಟೈನರ್ ಸಿನಿಮಾನ ಕೊಡೋ ಧಾವಂತದಲ್ಲಿದ್ದೇವೆ.