ಒಲಿಂಪಿಕ್ಸ್ನ ಪೌರುಷರ ಡಬಲ್ಸ್ನ ಮೊದಲ ಸುತ್ತಿನಲ್ಲೇ ಸೋತ ಬಳಿಕ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್ ಬೋಪಣ್ಣ ಭಾರತೀಯ ಟೆನಿಸ್ಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ 12 ವರ್ಷಗಳ ಸುಧೀರ್ಘ ಪಯಣಕ್ಕೆ ತೆರೆ ಬಿದ್ದಂತಾಗಿದೆ. ಬೋಪಣ್ಣ ಎಟಿಪಿ ಟೂರ್ನಿಗಳಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ, ಅಂದರೆ ಏಷ್ಯನ್, ಕಾಮನ್ವೆಲ್ತ್, ಒಲಿಂಪಿಕ್ಸ್, ಡೇವಿಸ್ ಕಪ್ ಟೂರ್ನಿಗಳಲ್ಲಿ ಬೋಪಣ್ಣ ಆಡುವುದಿಲ್ಲ. ಆದರೆ ಗ್ರಾನ್ ಸ್ಲಾಂ ಸೇರಿ ಇನ್ನಿತರ ಎಟಿಪಿ ಟೂರ್ನಿಗಳಲ್ಲಿ ಇನ್ನಷ್ಟು ದಿನ ಆಡುವುದಾಗಿ ಖಚಿತಪಡಿಸಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ಮಾತನಾಡಿರುವ 44 ವರ್ಷದ ಬೋಪಣ್ಣ ʻಖಂಡಿತವಾಗಿಯೂ ಇದು ಭಾರತದ ಪರ ನನ್ನ ಕೊನೆ ಪಂದ್ಯ, ನಾನೀಗ ಯಾವ ಹಂತದಲ್ಲಿ ಇದ್ದೇನೆ ಎಂಬುದು ಗೊತ್ತು, ಇಷ್ಟು ಕಾಲ ಆಡಿದ್ದೇ ಬೋನಸ್, ಭಾರತವನ್ನು 2 ದಶಕಗಳ ಕಾಲ ಪ್ರತಿನಿಧಿಸುತ್ತೇನೆ ಎಂದು ನಾವು ಭಾವಿಸಿರಲಿಲ್ಲ’ ಎಂದಿದ್ದಾರೆ.