ಶ್ರೀ ಅಯ್ಯಪ್ಪ ದೇವರ ದರ್ಶನಕ್ಕೆ ಶಬರಿಮಲೆಗೆ ತೆರಳುವ ಭಕ್ತರಿಗೆ ತಿರುವಾಂಕೂರು ದೇವಸ್ಥಾನ ಮಹತ್ವದ ಸೂಚನೆ ನೀಡಿದೆ. ಕಾರ್ತಿಕ ಮಾಸವಾದ್ದರಿಂದ ಈ ಸಂದರ್ಭದಲ್ಲಿ ಹಲವು ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇರುತ್ತೆ.ಇನ್ನು ಕಾರ್ತಿಕ ಮಾಸದಲ್ಲಿ ಮಾಲೆ ಧರಿಸುವ ಸ್ವಾಮಿಗಳ ಸಂಖ್ಯೆಯೂ ಹೆಚ್ಚು. ಇಂತಹ ಸಮಯದಲ್ಲಿ ಅಯ್ಯಪ್ಪ ದೇವರ ದರ್ಶನಕ್ಕೆ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತದೆ. ಹಾಗಾಗಿಯೇ ಇದೀಗ ಆಧಾರ್ ಕಾರ್ಡ್ ಕಡ್ಡಾಯ ಎಂದು ದೇವಸ್ಥಾನ ಮಂಡಳಿ ಘೋಷಣೆ ಮಾಡಿದೆ.
ತಿರುವಾಂಕೂರು ದೇವಸ್ಥಾನದ ಅಧ್ಯಕ್ಷ ಪ್ರಶಾಂತ್ , ಅಯ್ಯಪ್ಪ ದರ್ಶನಕ್ಕೆ ದಿನಕ್ಕೆ 70 ಸಾವಿರ ಭಕ್ತರಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಮಕರವಿಳಕ್ಕು ಋತುವಿನ ಪ್ರಕಾರ, ಆನ್ಲೈನ್ ಬುಕಿಂಗ್ ಆಧಾರದ ಮೇಲೆ ಪ್ರತಿದಿನ 70,000 ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು, ತ್ವರಿತ ಬುಕಿಂಗ್ ಆಧಾರದ ಮೇಲೆ ಇನ್ನೂ 10,000 ಜನರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ವಂಡಿಪ್ಪೆರಿಯಾರ್, ಎರುಮೇಲಿ ಮತ್ತು ಬಾಂಬೆಯಲ್ಲಿ ಮೀಸಲಾತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇನ್ಮುಂದೆ ಶಬರಿಮಲೆಗೆ ಬರುವ ಎಲ್ಲಾ ಭಕ್ತರಿಗೆ ಆಧಾರ್ ಕಡ್ಡಾಯವಾಗಿದೆ ಎಂದು ತಿರುವಾಂಕೂರು ದೇವಸ್ಥಾನದ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಮಾಲೆ ಧರಿಸಿ ಇರುಮುಡಿ ಕಟ್ಟಿಕೊಂಡು ಹೋಗುತ್ತಾರೆ. ಕೆಲವು ಮಾಲಾಧಾರಿಗಳು ವಿಮಾನ ಪ್ರಯಾಣದ ಮೂಲಕ ಶಬರಿಮಲೆಯನ್ನು ತಲುಪುತ್ತಾರೆ. ಆದರೆ, ವಿಮಾನದ ನಿಯಮದ ಪ್ರಕಾರ ವಿಮಾನದಲ್ಲಿ ತೆಂಗಿನಕಾಯಿಯನ್ನು ತರುವಂತಿಲ್ಲ. ಸದ್ಯ ವಿಮಾನದಲ್ಲಿ ತೆಂಗಿನಕಾಯಿ ತರುವಂತಿಲ್ಲ ಎಂಬ ನಿಯಮಕ್ಕೆ ಬ್ರೇಕ್ ಬಿದ್ದಿದ್ದು, ಶಬರಿಮಲೆ ಮಾಲಾಧಾರಿಗಳಿಗೆ ಸಿಹಿ ಸುದ್ದಿಯೊಂದನ್ನು ವಿಮಾನಯಾನ ಇಲಾಖೆ ನೀಡಿದೆ. ಅರೇ ಏನದು ಶಬರಿಮಲೆ ಭಕ್ತರಿಗೆ ಸಿಹಿ ಸುದ್ದಿ ಅಂತೀರಾ ಈ ಸುದ್ದಿ ನೋಡಿ ನಿಮಗೆ ತಿಳಿಯುತ್ತದೆ.