ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ಹೆಸರಾಂತ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು, ವಿಭಿನ್ನ ಕಂಟೆಂಟ್ ವುಳ್ಳ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಧಿಕ ಸಂಖ್ಯೆಯಲ್ಲಿ ಟ್ರೇಲರ್ ವೀಕ್ಷಣೆಯಾಗುತ್ತಿದ್ದು, ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ.
ಛೂ ಮಂತರ್.. ಇಂದು ಸಂಕ್ರಾಂತಿ ಹಬ್ಬದ ವಿಶೇಷ ಎಲ್ಲೆಡೆ ರಿಲೀಸ್ ಆಗಿರೋ ಹಾರರ್ ಕಾಮಿಡಿ ಸಿನಿಮಾ. ಶರಣ್ ನಾಯಕನಟನಾಗಿ ಬಣ್ಣ ಹಚ್ಚಿರೋ ಈ ಚಿತ್ರಕ್ಕೆ ಕರ್ವ ಖ್ಯಾತಿಯ ನವನೀತ್ ಆ್ಯಕ್ಷನ್ ಕಟ್ ಹೇಳಿದ್ದು, ಮಾಸ್ ಲೀಡರ್ ಖ್ಯಾತಿಯ ತರುಣ್ ಶಿವಪ್ಪ-ಮಾನಸ ತರುಣ್ ಬಂಡವಾಳ ಹೂಡಿದ್ದಾರೆ. ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ರಜಿನಿ ಭಾರದ್ವಜ್, ಪ್ರಭು ಮುಂಡ್ಕರ್ ಹೀಗೆ ದೊಡ್ಡ ತಾರಾಗಣವೇ ಈ ಚಿತ್ರಕ್ಕಿದೆ. ತೆಲುಗಿನ ಗೇಮ್ ಚೇಂಜರ್, ಢಾಕು ಮಹಾರಾಜ್, ಸಂಕ್ರಾಂತಿಕಿ ವಸ್ತುನ್ನಾಂ ಸಿನಿಮಾಗಳು, ತಮಿಳಿನ ಜಯಂ ರವಿ, ಅರುಣ್ ವಿಜಯ್, ವಿಶಾಲ್ ಚಿತ್ರಗಳ ನಡುವೆ ನಮ್ಮ ಕನ್ನಡಿಗರ ಛೂ ಮಂತರ್ ಗೆ ಬೊಂಬಾಟ್ ರೆಸ್ಪಾನ್ಸ್ ಸಿಗ್ತಿದೆ. ನಿನ್ನೆ ನಡೆದ ಪ್ರೀಮಿಯರ್ ಶೋನಲ್ಲಿ ಎಲ್ಲರೂ ಛೂ ಮಂತರ್ ಗೆ ಫಿದಾ ಆಗಿದ್ದಾರೆ. ಆಸ್ಕರ್ ವಿಜೇತ ರೆಸುಲ್ ಪೂಕುಟ್ಟಿ ಸೌಂಡ್ ಡಿಸೈನ್ ಚಿತ್ರಕ್ಕೆ ಪ್ಲಸ್ ಆಗಿದೆ. ಇನ್ನು ಶರಣ್ ಎಂಥದ್ದೇ ಪಾತ್ರ ಕೊಟ್ಟರೂ ಅದಕ್ಕೆ ಅದ್ಭುತವಾಗಿ ಜೀವ ತುಂಬುತ್ತಾರೆ. ಮೇಕಿಂಗ್ ನೆಕ್ಸ್ಟ್ ಲೆವೆಲ್ ಗಿದ್ದು, ಟೆಕ್ನಿಕಲಿ ಸಿನಿಮಾ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಿದೆ. ಒಟ್ಟಾರೆ ಸಂಕ್ರಾಂತಿ ಮೂಲಕ ಹೊಸ ವರ್ಷದಲ್ಲಿ ಛೂ ಮಂತರ್ ಸ್ಯಾಂಡಲ್ ವುಡ್ ಗೆ ಒಂದೊಳ್ಳೆ ಜೋಶ್ ತಂದುಕೊಟ್ಟಿದೆ. ಕಳೆದ ವರ್ಷ ಉಪಾಧ್ಯಕ್ಷ, ಈ ವರ್ಷ ಅಧ್ಯಕ್ಷ- ಉಪಾಧ್ಯಕ್ಷರ ಛೂ ಮಂತರ್ ಅಂತಿದ್ದಾರೆ ಚಿತ್ರಪ್ರೇಮಿಗಳು.
ಇನ್ನು ದರ್ಶನ್ ಸೂಚಿಸಿದ ಛೂ ಮಂತರ್ ಟೈಟಲ್ ನ್ಯೂ ಇಯರ್ ಆರಂಭದಲ್ಲೇ ಕನ್ನಡ ಚಿತ್ರರಂಗಕ್ಕೆ ಸಕ್ಸಸ್ ತಂದುಕೊಟ್ಟಿರೋದು ಡಿಬಾಸ್ ಫ್ಯಾನ್ಸ್ ಮುಖದಲ್ಲೂ ಖುಷಿ ತಂದಿದೆ. ಇದ್ರಿಂದ ಕರ್ವ ಡೈರೆಕ್ಟರ್ ನವನೀತ್, ನಿರ್ಮಾಪಕ ತರುಣ್ ಶಿವಪ್ಪ ಹಾಗೂ ನಟ ಶರಣ್ ಸಿನಿಮೋತ್ಸಾಹ ಮತ್ತಷ್ಟು ಹಿಗ್ಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್