“ಸೀತಾ ರಾಮ” ಧಾರಾವಾಹಿಯ ಪ್ರಿಯಾ ಪಾತ್ರದಲ್ಲಿ ಪ್ರೇಕ್ಷಕರ ಹೃದಯಗಳನ್ನು ಗೆದ್ದ ನಟಿ ಮೇಘನಾ ಶಂಕರಪ್ಪ, ರಿಯಲ್ ಲೈಫ್ನಲ್ಲಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ತಮ್ಮ ಹಾಸ್ಯಮಯ ಮತ್ತು ಬಿಂದಾಸ್ ಅಭಿನಯದಿಂದ ವೀಕ್ಷಕರನ್ನು ಮೆಚ್ಚಿಸಿದ್ದ ಪ್ರಿಯಾ, ಇನ್ನು ಕೆಲವೇ ದಿನಗಳಲ್ಲಿ ಜೀವನಸಂಗಾತಿ ಜಯಂತ್ ಅವರೊಂದಿಗೆ ವಿವಾಹಕ್ಕೆ ಸನ್ನದ್ಧರಾಗುತ್ತಿದ್ದಾರೆ.
ಇದರ ಮಧ್ಯೆ ಮೇಘನಾ ಶಂಕರಪ್ಪ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಭಿನ್ನವಾಗಿರೋ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಮತ್ತೊಂದು ರೋಮ್ಯಾಂಟಿಕ್ ಪ್ರಿ ವೆಡ್ಡಿಂಗ್ ಶೂಟಿಂಗ್ ಮಾಡಿಸಿರೋ ಪ್ರಿಯಾ, ತಮ್ಮ ಲೈಫ್ನ ಸುಂದರ ಕ್ಷಣಗಳನ್ನ ಹಂಚಿಕೊಂಡಿದ್ದಾರೆ.
ಬಿಂದಾಸ್ ಹುಡುಗಿ ಪ್ರಿಯಾ ರಿಯಲ್ ಲೈಫ್ನಲ್ಲೂ ಅಷ್ಟೇ ಜಾಲಿ.. ಜಾಲಿ. ಇದೇ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ ಮೇಘನಾ. ಇದೀಗ ಜಯಂತ್ ಜೊತೆಗೆ ತುಂಬಾನೆ ಮುದ್ದಾದ, ರೋಮ್ಯಾಂಟಿಕ್ ಆಗಿರುವ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಅಂದ್ಹಾಗೇ ಮೇಘನಾ ಅವರದ್ದು ಅರೇಂಜ್ ಮ್ಯಾರೇಜ್.
ಶಾಸ್ತ್ರೋಕ್ತವಾಗಿ ಗುರು ಹಿರಿಯರು ನಿಶ್ಚಯಿಸಿರೋ ಮದುವೆ. ಜಯಂತ್ ಸಿಕ್ಕಾಪಟ್ಟೆ ಸೈಲೆಂಟ್. ಆದ್ರೆ ನಾನು ಫಟ ಫಟ ಅಂತ ಮಾತ್ನಾಡ್ತೀನಿ. ಹೀಗಾಗಿ ಇಬ್ಬರಿಗೂ ಮ್ಯಾಚ್ ಆಯ್ತು ಅಂತಾರೆ ನಟಿ ಮೇಘನಾ. ಶೇರ್ ಮಾಡಿಕೊಂಡ ಹೊಸ ವಿಡಿಯೋದಲ್ಲಿ ನೀ ನಂಗೆ ಅಲ್ಲವಾ.. ಎಂದು ಭಾವಿ ಪತಿಯನ್ನ ಮುದ್ದಾಡಿದ್ದಾರೆ ನಟಿ. ಈ ಜೋಡಿ ಯಾವಾಗಲೂ ಹೀಗೆ ನಗು ನಗುತ್ತಾ, ಜೊತೆಯಾಗಿರಲಿ ಎಂದು ಅಭಿಮಾನಿಗಳು ಕೂಡ ಹಾರೈಸುತ್ತಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc