ರಾಜ್ಯದಲ್ಲಿ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಬಿಜೆಪಿ ಜೆಡಿಎಸ್ ಗೆ ಇದು ಜೀರ್ಣಿಸಿಕೊಳ್ಳಲೂ ಸಾಧ್ಯವಾಗದ ಅತಂತ್ರ ಪರಿಸ್ಥಿತಿಯಾಗಿದೆ. 3 ಕ್ಷೇತ್ರಗಳ ಪೈಕಿ 1 ಕ್ಷೇತ್ರವಾದ್ರು ಬಿಜೆಪಿ ಜೆಡಿಎಸ್ ಪಕ್ಷ ಗೆಲ್ಲುತ್ತದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. 3 ಕ್ಷೇತ್ರಗಳ ಪೈಕಿ 3ರನ್ನೂ ಕಾಂಗ್ರೆಸ್ ಪಕ್ಷ ತನ್ನ ಖಾತೆಗೆ ಸೇರಿಸಿಕೊಂಡಿದೆ.
ಸಂಡೂರು ಉಪಚುನಾವಣೆಗೆ ಬಿಜೆಪಿ ಪಕ್ಷದಿಂದ ಬಂಗಾರು ಹನುಮಂತು ಅವರನ್ನ ಕಣಕ್ಕೆ ಇಳಿಸಿತ್ತು. ಅವರ ವಿರುದ್ದ ಕಾಂಗ್ರೆಸ್ ಪಕ್ಷ ಅನ್ನಪೂರ್ಣ ತುಕಾರಾಂ ಅವರನ್ನ ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡಿದೆ. ಸಂಡೂರು ಸೋಲಿನ ಬಗ್ಗೆ ಹೈಕಮಾಂಡ್ ಗೆ ಬಿ.ವೈ. ವಿಜಯೇಂದ್ರ ದೂರು ಸಲ್ಲಿಸಿದ್ದಾರೆ.
ಹೈಕಮಾಂಡ್ ಗೆ ಸಂಡೂರು ಸೋಲಿನ ವರದಿ ನೀಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ. ಟಿಕೆಟ್ ಹಂಚಿಕೆಯಲ್ಲಿ ಯಡವಿದ್ದೇ ಸೋಲಿಗೆ ಕಾರಣ ಎಂದು ದೂರಿನಲ್ಲಿ ಹೇಳಿದ್ದಾರೆ. ಬಂಗಾರು ಹನುಮಂತು ಒಮ್ಮತದ ಅಭ್ಯರ್ಥಿ ಆಗಿರಲಿಲ್ಲ, ಕ್ಷೇತ್ರದಲ್ಲಿ ಬಂಗಾರು ಹನುಮಂತು ಪರಿಚಿತರೂ ಅಲ್ಲ, ಕೊನೆ ಹಂತದಲ್ಲಿ ಬಂಗಾರು ಹನುಮಂತು ಆಯ್ಕೆ ಸರಿಯಲ್ಲ, ಶಿಫಾರಸ್ಸು ಮಾಡಿದ್ದ ಹೆಸರೇ ಬೇರೆ..ಆಯ್ಕೆ ಆಗಿದ್ದೇ ಬೇರೆ. ಸ್ಥಳೀಯ ನಾಯಕರನ್ನ ಬಂಗಾರು ಹನುಮಂತು ಕಡೆಗಣಿಸಿದ್ರು. ಕೇವಲ ಜನಾರ್ದನ ರೆಡ್ಡಿ ಮೇಲೆ ಮಾತ್ರ ಅವಲಂಬಿತರಾಗಿದ್ರು ಎಂದು ದೂರಿನಲ್ಲಿ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಅಣ್ಣ ಗೆಲ್ಲಿಸ್ತಾರೆ ಅಂತ ಓಡಾಡುತ್ತಿದ್ರು. ಹೀಗೆ ಮಾತ್ನಾಡಿದ್ರೆ ಸ್ಥಳೀಯ ನಾಯಕರ ಬೆಂಬಲ ಹೇಗೆ ಸಿಗುತ್ತೆ.? ಮಾಜಿ ಸಂಸದ ದೇವೇಂದ್ರಪ್ಪಗೆ ಟಿಕೆಟ್ ನೀಡಿದ್ರೆ ಗೆಲ್ತಿದ್ವಿ. ದೇವೇಂದ್ರಪ್ಪಗೆ ಕ್ಷೇತ್ರದಲ್ಲಿ ಹಿಡಿತ ಇದೆ..ಅನುಭವ ಇದೆ. ಹೈಕಮಾಂಡ್ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಸ್ತಾಪ ಮಾಡಿ ಸೋಲಿನ ಕಾರಣವನ್ನ ಇಂಚಿಂಚೂ ಬಿಚ್ಚಿಟ್ಟಿದ್ದಾರೆ.