ಸಂಡೂರು: ಇಲ್ಲಿನ ಎಪಿಎಂಸಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಭಾರಿ ಸ್ಪಂದನೆ ವ್ಯಕ್ತವಾಯಿತು.
ಒಟ್ಟು 1541 ಅಭ್ಯರ್ಥಿಗಳು ಈ ಮೇಳದಲ್ಲಿ ಉದ್ಯೋಗ ಕೋರಿ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ ಅಂತಿಮ ಹಂತಕ್ಕೆ 885 ಮಂದಿ ಆಯ್ಕೆಗೊಂಡಿದ್ದಾರೆ. (ಕೆಲವು ಅಭ್ಯರ್ಥಿಗಳು ಹಲವು ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ) ಒಟ್ಟು 642 ಮಂದಿಗೆ ನೇಮಕಾತಿ ಪತ್ರವನ್ನು ನೀಡಲಾಗಿದೆ. ಎಂದರೆ 36 ವಿಕಲಚೇತನರು ಭಾಗವಹಿಸಿದ್ದರು.
55 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. 4000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಮೇಳದಲ್ಲಿದ್ದವು. ಎಸ್ಎಸ್ಎಲ್ಸಿ, ಪಿಯು, ಪದವಿ, ಡಿಪ್ಲೊಮಾ, ಪ್ಯಾರಾಮೆಡಿಕಲ್, ಫಾರ್ಮಸಿ, ಸ್ನಾತಕೋತ್ತರ ಪದವೀಧರರು, ವಿಶೇಷ ಚೇತನರು ಹಾಗೂ ತೃತೀಯ ಲಿಂಗಿಗಳು ಭಾಗವಹಿಸಿದ್ದರು.
ಅಭ್ಯರ್ಥಿಗಳ ಧನ್ಯವಾದ: ಮೇಳದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಸಂತೋಷ್ ಲಾಡ್ ಉಪಕ್ರಮಕ್ಕೆ ಧನ್ಯವಾದಗಳನ್ನು ತಿಳಿಸಿದರು. ಉದ್ಯೋಗ ಪಡೆದ ಫಾರ್ಮಸಿ ಪದವೀಧರೆ ಗೀತಾ ಅವರು ಮಾತನಾಡಿ, “ಈವರೆಗೆ ಸಾಕಷ್ಟು ಕಡೆ ಉದ್ಯೋಗಕ್ಕೆ ಪ್ರಯತ್ನಿಸಿದ್ದೆ. ಆದರೆ ಉದ್ಯೋಗ ಸಿಕ್ಕಿರಲಿಲ್ಲ. ಆದರೆ ಈ ಬಾರಿ ನಮ್ಮೂರಿನಲ್ಲೇ ಕಂಪನಿಗಳು ಬಂದು ಕೆಲಸ ಕೊಟ್ಟಿವೆ. ಇಂತಹ ಕ್ರಮ ಕೈಗೊಂಡ ಸಂತೋಷ್ ಲಾಡ್ ಫೌಂಡೇಶನ್ಗೆ ಧನ್ಯವಾದ” ಎಂದು ಹೇಳಿದರು.
ಕಲಘಟಗಿಯಲ್ಲೂ ನಡೆದಿತ್ತು ಉದ್ಯೋಗ ಮೇಳ
ಕಲಘಟಗಿಯ ಇಲ್ಲಿನ ಜನತಾ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಶನಿವಾರ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು.