ಭಾರತದಲ್ಲಿ ದಿನ ಬಳಕೆಗೆ ಬಾತ್ ರೂಮ್ಗೆ ಬಳಕೆ ಮಾಡೋ ಮಾಮೂಲಿ ಒಂದು ಜೊತೆ ಹವಾಯಿ ಚಪ್ಪಲಿ ದರ 1 ಲಕ್ಷ ರೂಪಾಯಿ ಆಗಿದೆ. ಸೌದಿ ಅರೇಬಿಯಾದಲ್ಲಿ ವ್ಯಕ್ತಿ ಒಬ್ಬರು ಚಪ್ಪಲಿ ಖರೀದಿ ಮಾಡಲೆಂದು ಸ್ಟೋರ್ವೊಂದರ ಒಳಗೆ ಹೋಗಿದ್ದಾರೆ. ಈ ವೇಳೆ ಆ ಸ್ಟೋರ್ನಲ್ಲಿ ಮಾಮೂಲಿ ಚಪ್ಪಲಿಗಳನ್ನು ಎಸಿ ರೂಮ್ನಲ್ಲಿ ಗ್ಲಾಸ್ ಒಳಗೆ ಒಳ್ಳೆ ಬಂಗಾರ ಇಡುವಾಗೆ ಇಡಲಾಗಿದೆ. ಚಪ್ಪಲಿಗಳನ್ನ ಗ್ಲಾಸ್ ಒಳಗಿಂದ ತೆಗೆದು ಸಿಬ್ಬಂದಿ ಬೆಂಡ್ ಮಾಡಿ, ಮೇಲೆ, ಕೆಳಗೆ ತೋರಿಸುತ್ತಾರೆ. ಆದರೆ ಇವುಗಳ ಬೆಲೆ 4,590 ಸೌದಿ ರಿಯಾಲ್ ಆಗಿದೆ. ಅಂದರೆ ಭಾರತದ ಕರೆನ್ಸಿಗೆ ಹೋಲಿಕೆ ಮಾಡಿದ್ರೆ ಇದರ ದರ ಬರೋಬ್ಬರಿ 1,02,240 ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ.