ಕೊರೋನ ವೈರಸ್ ಇಡೀ ಜಗತನ್ನೇ ಬೀಕರವಾಗಿ ಬೆಚ್ಚಿ ಬೀಳಿಸಿತ್ತು. ಅದಾದ ನಂತರ ನಾನಾ ಕೋವಿಡ್ ರೂಪಂತರ ಮೂಲಕ ಕಾಡಿತ್ತು. ಇದೀಗ ಮತ್ತೆ ಕೊರೋನ ವೈರಸ್ ಹೊಸ ರೂಪದಿಂದ ಒಕ್ಕರಿಸಿಕೊಂಡಿದೆ.
ಇತ್ತೀಚಿಗೆ ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯವು ಈ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತಂದಿದೆ. ಏಪ್ರಿಲ್ 10 ಮತ್ತು 17 ರ ನಡುವೆ ಈ ಅಪಾಯಕಾರಿ ವೈರಸ್ ಮಧ್ಯ-ಪ್ರಾಚ್ಯ ಉಸಿರಾಟದ ಸಿಂಡ್ರೋಮ್ ರೂಪದಲ್ಲಿ ಆ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಕೊರೋನಾ ವೈರಸ್ನ ಹೊಸ ರೂಪಾಂತರದ ಮೂರು ಪ್ರಕರಣಗಳು ಈಗಾಗಲೇ ಪತ್ತೆಯಾಗಿವೆ. ದುರಂತವೆಂದರೆ ರಿಯಾದ್ನಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.
WHO ಪ್ರಕಾರ ಎಲ್ಲ ಮೂರೂ ಪ್ರಕರಣಗಳು ರಾಜಧಾನಿ ರಿಯಾದ್ಗೆ ಸೇರಿವೆ ಎನ್ನಲಾಗಿದೆ. ಸೌದಿಯಾದ ಒಂಟೆಗಳಿಂದ ಸೋಂಕು ಹರಡುತ್ತಿದೆ. ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ ಹೊಂದಿರುವ ಜನರ ವಯಸ್ಸು 56 ರಿಂದ 60 ವರ್ಷ. ಈ ವರದಿಯು ವಿಶ್ವಾದ್ಯಂತ ಕೊರೊನಾ ವೈರಸ್ ಹರಡುವ ಬಗ್ಗೆ ಮತ್ತೊಮ್ಮೆ ಆತಂಕವನ್ನು ಮೂಡಿಸಿದೆ.