- ತಾಯಿಯಾಗ್ತಿರುವ ಲಕ್ಷ್ಮಿಬಾರಮ್ಮ ಸೀರಿಯಲ್ನ ನೇಹಾಗೌಡ
- ಮೊದಲ ಮಗುವಿಗೆ ಅಮ್ಮನಾಗ್ತಿರುವ ವಿಚಾರ ಹಂಚಿಕೊಂಡ ನೇಹಾಗೌಡ
ಲಕ್ಷ್ಮಿಬಾರಮ್ಮ ಸೀರಿಯಲ್ ಮೂಲಕ ಗೊಂಬೆ ಅಂತನೇ ಕರುನಾಡಿಗೆ ಚಿರಪರಿಚಿತರಾದ ನೇಹಾಗೌಡ ತಾಯಿಯಾಗ್ತಿದ್ದಾರೆ. ಮದುವೆಯಾಗಿ ಆರು ವರ್ಷಗಳು ಕಳೆದ್ಮೇಲೆ ಮೊದಲ ಮಗುವಿಗೆ ಅಮ್ಮನಾಗ್ತಿರುವ ಗೊಂಬೆ ಈ ಸಂತಸದ ವಿಚಾರವನ್ನ ಸ್ಕ್ಯಾನಿಂಗ್ ಫೋಟೋ ಪ್ಲಸ್ ವಿಡಿಯೋಗಳನ್ನ ಹಂಚಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಅವರಿಬ್ಬರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭಕೋರುತ್ತಿದ್ದಾರೆ.
ಗೊಂಬೆ ಖ್ಯಾತಿಯ ನೇಹಾಗೌಡ ಹಾಗೂ ಚಂದನ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಇವರು ತಮ್ಮ ಸ್ನೇಹ ಹಾಗೂ ಪ್ರೀತಿಗೆ ದಾಂಪತ್ಯದ ಮುದ್ರೆ ಹೊತ್ತಿದ್ದರು. ಕಳೆದ ಆರು ವರ್ಷಗಳ ಹಿಂದೆ ಬೆಂಗಳೂರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಅಲ್ಲಿಂದ ತಮ್ಮ ಕರಿಯರ್ ಕಡೆ ಗಮನವಹಿಸಿದ್ದ ಈ ಜೋಡಿ ಫೈನಲೀ ತಮ್ಮ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಚೊಚ್ಚಲ ಕಂದಮ್ಮನನ್ನ ಬರಮಾಡಿಕೊಳ್ಳೋಕೆ ಕಾತುರಗೊಂಡಿದೆ. ‘ಇಬ್ಬರು ಮೂವರಾಗೋ ಸಮಯ’ ಅಂತ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದೆ.
ಕಿರುತೆರೆ ಲೋಕದಲ್ಲಿ ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆರಂಭದಲ್ಲಿ ಗೊಂಬೆ ಮಾತ್ರ ಸ್ಮಾಲ್ ಸ್ಕ್ರೀನ್ನಲ್ಲಿ ಮಿಂಚುತ್ತಿದ್ದರು. ತದನಂತರ ಚಂದನ್ ಕೂಡ ಸೀರಿಯಲ್ ಲೋಕಕ್ಕೆ ಎಂಟ್ರಿಕೊಟ್ಟರು. ಸದ್ಯ ಗೊಂಬೆ ಪತಿ ಚಂದನ್ ಅಂತರಪಟ ಸೀರಿಯಲ್ನಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಪತ್ನಿಯಂತೆ ತಮ್ಮದೇ ಆದ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡಿದ್ದಾರೆ. ಮೊದಲು ಈ ಜೋಡಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಜ-ರಾಣಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಗೆದ್ದಿದ್ದರು.