ಶುಕ್ರವಾರದಂದು ಬಂಡಾಯದ ಮಾತುಗಳನ್ನಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೊಂದೇ ತನ್ನ ಗುರಿ ಎಂದು ಹೇಳಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಇವತ್ತು ಸಿದ್ದರಾಮಯ್ಯ ಎದುರು ಶಾಲಾ ಬಾಲಕನಂತೆ ಕೂತಿದ್ದರು. ಕೆಪಿಸಿಸಿ ಅಧ್ಯಕ್ಷರು ಹೇಳಿದರೂ ಕೇಳದ ಖಾದ್ರಿ ಸಿಎಂ ಹೇಳಿದ ಮಾತಿಗೆ ಗಪ್ ಚುಪ್ ಆಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪಳಗಿದ ರಾಜಕಾರಣಿ, ಭಿನ್ನಮತ ಹೇಗೆ ಶಮನಗೊಳಿಸಬೇಕೆನ್ನುವುದು ಅವರಿಗೆ ಗೊತ್ತು. ಶಿಗ್ಗಾಂವಿ ಉಪಚುನಾವಣೆಗೆ ಟಿಕೆಟ್ ನೀಡದ ಕಾರಣ ರೊಚ್ಚಿಗೆದ್ದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂಪೀರ್ ಖಾದ್ರಿಯವರ ಮನವೊಲಿಸಿರುವ ಸಿದ್ದರಾಮಯ್ಯ ಪಕ್ಷದ ಅಧಿಕೃತ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ.