- ಟಿಕೆಟ್ಗಾಗಿ ಕೈ ಪಾಳಯದಲ್ಲಿ ಶುರುವಾಯ್ತು ಬಿಗ್ ಫೈಟ್
- ಖಾದ್ರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರ ಆಗ್ರಹ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಸಭಾ ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ, ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಕಾವು ರಂಗೇರಿದೆ. ಅದರಲ್ಲೂ ಟಿಕೆಟ್ಗಾಗಿ ಕೈ ಪಾಳಯದಲ್ಲಿ ಶುರುವಾಯ್ತು ಬಿಗ್ ಫೈಟ್ ಶುರುವಾಗಿದೆ.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಪರ ಬೆಂಬಲಿಗರು ಬೃಹತ್ ಹೋರಾಟ ನಡೆಸಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಹೌದು ಶಿಗ್ಗಾವಿ ಪಟ್ಟಣದಲ್ಲಿ ಪಾದಯಾತ್ರೆ ಮಾಡಿದ ಕೈ ಕಾರ್ಯಕರ್ತರು, ಬೊಮ್ಮಾಯಿ ಎದುರು ಮೂರು ಸಲ ಸೋತಿರುವ ಖಾದ್ರಿಗೆ ಟಿಕೆಟ್ ನೀಡುವಂತೆ ಖಾದ್ರಿ ಬೆಂಬಲಿಗರು ಆಗ್ರಹಿಸಿದ್ದು, ಉಪಚುನಾವಣೆಯಲ್ಲಿ ಖಾದ್ರಿಗೆ ನೀಡಿದರೆ ಮಾತ್ರ ಕಾಂಗ್ರೆಸ್ ಗೆ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.