- ಬ್ರೇಕ್ ಫೇಲ್ ಆಗಿದ್ದರಿಂದ ಬಸ್ ಪಲ್ಟಿ
- ಇಬ್ಬರ ಸಾವು.. 30ಕ್ಕು ಹೆಚ್ಚು ಮಂದಿಗೆ ಗಾಯ
- ಗಾಯಾಳುಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಬ್ರೇಕ್ ಫೇಲ್ ಆಗಿದ್ದರಿಂದ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶಿವಮೊಗ್ಗದ ಗೇರುಸೊಪ್ಪ ಸಮೀಪ ಸುಳಿಮಕ್ಕಿ ಕ್ರಾಸ್ ಬಳಿ ನಡೆದಿದೆ.
ಗೌರಿಬಿದನೂರಿನ ಗದರೆ ಹಾಗೂ ಮಲಸಂದ್ರ ಗ್ರಾಮಸ್ಥರು ಪ್ರವಾಸಕ್ಕೆಂದು ಎರಡು ಬಸ್ನಲ್ಲಿ ತೆರಳಿದ್ದರು. ಪ್ರವಾಸ ಮುಗಿಸಿ ಹೊನ್ನಾವರ ಕಡೆಗೆ ಹೊರಟಿದ್ದ ವೇಳೆ ಈ ದುರ್ಘಟನೆ ನಡೆದಿದೆ. 2 ಬಸ್ನಲ್ಲಿ ಒಟ್ಟು 80 ಪ್ರಯಾಣಿಕರು ಇದ್ದು, ಈ ಘಟನೆಯಲ್ಲಿ ಹಲವರ ಕೈಕಾಲು ಕಟ್ ಆಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.