ಸಚಿವ ಎಂ.ಬಿ ಪಾಟೀಲ್ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಂಪುಟ ಸಹೋದ್ಯೋಗಿ ಶಿವಾನಂದ್ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. ಎಂ.ಬಿ ಪಾಟೀಲ್ ವಿಚಾರ ಅವರೇ ಮಾತಡಬೇಕು ಎಂದಿದ್ದಾರೆ. ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿವಾನಂದ ಪಾಟೀಲ್ ಹಲವಾರು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇಂದು ಮುಂಜಾನೆ ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಎಂಬಿ ಪಟೀಲ್ ಕಾಣಿಸಿಕೊಂಡ ಬೆನ್ನಲ್ಲೇ ಹಲವಾರು ರೀತಿಯ ರಾಜಕೀಯ ಚರ್ಚೆಗಳು ಶುರುವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿ, ಅದರಲ್ಲಿ ಏನ್ ತಪ್ಪು ಎಂದಿದ್ದಾರೆ.
ಮುಂದಿನ ಸಿಎಂ ಎಂ.ಬಿ.ಪಾಟೀಲ್ ಎಂಬ ಚರ್ಚೆಗೆ ಉತ್ತರಿಸಿದ ಸಚಿವರು ಟಾಂಗ್ ಕೊಟ್ಟಿದ್ದಾರೆ. ಎಂ.ಬಿ. ಪಾಟೀಲ್ಗಿಂತ ತುಂಬಾ ಜನ ಸೀನಿಯರ್ಸ್ ಇದ್ದಾರೆ. ಅವರು ಇನ್ನೂ ಕಾಯಬೇಕು. ಅವರ ಮೇಲಿನ ಭ್ರಷ್ಟಾಚಾರದ ಆರೋಪಕ್ಕೆ ಅವರೇ ಉತ್ತರ ಕೊಡ್ತಾರೆ ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ.
ಎಪಿಎಂಸಿ ಯಾರ್ಡ್ ಗಳು ಎಂಎಸ್ಪಿ ಕಾನೂನು ಬಂದ ಮೇಲೆ ಕ್ರಿಯಾಶೀಲವಾಗಿಲ್ಲ. ಕರ್ನಾಟಕದಲ್ಲಿ ನಾಲ್ಕು ಬೆಳೆಗಳಿಗೆ ಎಂಎಸ್ಪಿ ಬೆಂಬಲ ಬೆಲೆ ಘೋಷಣೆ ಮಾಡಿದ್ದೇವೆ. ರಾಜ್ಯದಲ್ಲಿ ಇದು ಮೊದಲ ಬಾರಿ ಮಾಡಿದ್ದೇವು, ಬಹುತೇಕ ಎಲ್ಲ ರೈತರು ಎಂಎಸ್ಪಿ ಬೆಂಬಲ ಬೆಲೆ ಸಿಗಬೇಕು ಅಂತಿದ್ದಾರೆ. ನಮ್ಮ ಎಲ್ಲ ಯಾರ್ಡ್ ಗಳಲ್ಲಿ ಸಂಗ್ರಹ ಆಗುತ್ತಿದೆ. ಹೆಸರು ಬೆಳೆ, ಸೂರ್ಯಕಾಂತಿ, ಉದ್ದು, ಸೋಯಾಬಿನ್ಗೆ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಕೊಬ್ಬರಿ ದರ ಮೇಲಿಂದ ಮೇಲೆ ಕುಸಿಯುತ್ತಿದೆ. ಅದಕ್ಕೂ ಕೂಡ ಬೆಂಬಲ ಬೆಲೆ ಕೊಡುವ ಕೆಲಸ ಮಾಡುತ್ತಿದ್ದೇವೆ.
2019 ರಲ್ಲಿ 618 ಕೋಟಿ ಆದಾಯ ಇತ್ತು, ಎಂಎಸ್ಪಿ ಕಾನೂನು ಬಂದ ನಂತರ ಆದಾಯ ಕುಸಿತ ಕಂಡಿದೆ, ಈ ವರ್ಷ 134 ಕೋಟಿ ಆದಾಯ ಬಂದಿದೆ, ಕಳೆದ ವರ್ಷ 73 ಕೋಟಿ ಇತ್ತು, ಅದನ್ನು 134 ಕೋಟಿಗೆ ತಂದಿದ್ದೇವೆ. ಎಲ್ಲ ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಬಹುತೇಕ ಕಡೆ ನಮ್ಮ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದೆ. ಅದನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಹೊರ ರಾಜ್ಯಕ್ಕೆ ಹೋಗುತ್ತಿದ್ದದರ ವಿರುದ್ಧ ದೂರು ಕೂಡ ದಾಖಲಿಸಿ ದಂಡ ವಸೂಲಿ ಮಾಡುತ್ತಿದ್ದೇವೆ ಎಂದು ವಿಧಾನಸೌಧದಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.