- ಶುಭ್ ಮನ್ ಗಿಲ್ನ ಮದುವೆ ಅಗಲಿರುವ ರಿಧಿಮಾ ಪಂಡಿತ್
- ಇದು ಸುಳ್ಳು ಸುದ್ದಿ ಎಂದ ನಟಿ ರಿಧಿಮಾ ಪಂಡಿತ್
ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿರುವ ರಿಧಿಮಾ ಪಂಡಿತ್, ಶುಭ್ ಮನ್ ಗಿಲ್ ನ ಮದುವೆ ಅಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ‘ಬಹು ಹಮಾರಿ ರಜ್ನಿ ಕಾಂತ್ ಇವರ ಮೊದಲ ಸೀರಿಯಲ್. ಇದಾದ ಬಳಿಕ ಆನೇಕ ಧಾರಾವಾಹಿಗಲ್ಲಿ ಇವರು ನಟಿಸಿದ್ದಾರೆ. ಇವರ ಮದುವೆ ಸುದ್ದಿ ಹಲ್ ಚಲ್ ಮಾಡಿತ್ತು.
ಟೀಮ್ ಇಂಡಿಯಾ ಆಟಗಾರ ಶುಭ್ಮನ್ ಗಿಲ್ ಹಾಗೂ ಕಿರುತೆರೆ ನಟಿ ರಿಧಿಮಾ ಪಂಡಿತ್ ಇಬ್ಬರು ಡಿಸೆಂಬರ್ ನಲ್ಲಿ ಮದುವೆಯಾಗುತ್ತಿದ್ದರೆ ಎಂಬ ಗಾಳಿ ಸುದ್ದಿ ಕೇಳಿಬರುತ್ತಿತು. ಇದನ್ನು ಯಾರು ಹರಡಿಸಿದ್ದಾರೆ ಎಂಬ ಮಾಹಿತಿ ಇಲ್ಲ. ರಿಧಿಮಾಗೆ 33 ವರ್ಷ, ಶುಭ್ಮನ್ಗೆ 24 ವರ್ಷ ಇವರ ಇಬ್ಬರ ನಡುವೆ 6 ವರ್ಷ ವಯಸ್ಸಿನ ಅಂತರವಿದೆ.
ಈ ಸುದ್ದಿ ಕೇಳಿದ ರಿಧಿಮಾ ಪ್ರತಿಕ್ರಿಯೆ ನೀಡಿದ್ದು, ನಾನು ಬೆಳಗ್ಗೆ ಎದ್ದಾಗ ನನಗೆ ಕೆಲವು ಪತ್ರಿಕೆಗಳಿಂದ ಫೋನ್ ಬಂದಿತ್ತು. ನನ್ನ ಜೀವನದಲ್ಲಿ ಏನಾದರೂ ಮುಖ್ಯವಾದ ಘಟನೆಗಳು ನಡೆದರೆ ನಾನು ತಿಳಿಸುತ್ತೇನೆ ಈಗಾ ಬಂದಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಇದನ್ನು ಕೇಳಿದ ಶುಭ್ಮನ್ ಗಿಲ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಹಿಂದೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ ಅವರ ಮಗಳು ಸಾರ ತೆಂಡುಲ್ಕರ್ ಹಾಗೂ ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿರುವ ಸುದ್ದಿ ಹರಿದಾಡುತ್ತಿತ್ತು. ಈ ಜೋಡಿ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದಿತ್ತು. ಸಾರ ಹಾಗೂ ಗಿಲ್ ಹೋಟೆಲ್ ನಲ್ಲಿ ಆಗಾಗ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶುಭ್ಮನ್ ಗಿಲ್ ಸಚಿನ್ ತೆಂಡುಲ್ಕರ್ ಅಳಿಯ ಆಗುತ್ತಾನೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ. ಸದ್ಯ ರಿಧಿಮಾ ಜೊತೆ ಮದುವೆಗೆ ಬ್ರೇಕ್ ಬಿದ್ದಿದೆ.