ಸಾಮಾನ್ಯವಾಗಿ ಒಂದು ಮನೆಯಲ್ಲಿ 2 ರಿಂದ 3 ಸ್ಮಾರ್ಟ್ ಫೋನ್ ಬಳಕೆದಾರರು ಸಿಗುತ್ತಾರೆ. ದೊಡ್ಡವರಿಂದ ಚಿಕ್ಕವರವರೆಗೂ ಫೋನ್ ಬಳಕೆ ಮಾಡ್ತಾರೆ. ಲೋಕಸಭಾ ಚುನಾವಣೆ ಮುಗಿಯುತಿದ್ದಂತೆ, ಕಮ್ಮಿ ದರದ ಮೊಬೈಲ್ ಸೇವೆಗಳು ರದ್ದು ಮಾಡುವ ಸಾಧ್ಯತೆ ಇದೆ.
ಬೆಲೆ ಏರಿಕೆ ಬಿಸಿ ತಟ್ಟಲಿದೆ ಸ್ಮಾರ್ಟ್ ಫೋನ್ ಬಳಕೆದರಾರಿಗೆ. 5G ಸೇವೆ ಜನಕ್ಕೆ ಒದಗಿಸಬೇಕು ಎಂದು ದೂರಸಂಪರ್ಕ ಕಂಪನಿಗಳು ಅಪಾರ ಹಣವನ್ನ ಇನ್ವೆಸ್ಟ್ ಮಾಡಿದ್ದಾರೆ. ಅದರಿಂದ ಲಾಭ ತೆಗೆಯಲು 25% ಅಷ್ಟು ಬೆಲೆ ಏರಿಕೆ ಆಗಲಿದೆ ಅಂತ ಹೇಳಲಾಗ್ತಾ ಇದೆ. ನಗರಗಳಲ್ಲಿ ಇರುವಂತಹ ಗ್ರಾಹಕರ ಮೊಬೈಲ್ ಸೇವೆಗೆ 3.2 ರಿಂದ 3.6 ಅಷ್ಟು ಹೆಚ್ಚಾಗುತ್ತೆ. ಗ್ರಾಮಾಂತರ ಜಿಲ್ಲೆಗಳಲ್ಲಿ 5.2 ರಿಂದ 5.8 ವರಿಗೆ ಹೆಚ್ಚಳವಾಗುತ್ತೆ. ಇದರಿಂದ ಏರ್ಟೆಲ್ ಹಾಗೂ jio ಕಂಪನಿಗಳಿಗೆ ಲಾಭ ಆಗಲಿದೆ. ಈ ದರ ಏರಿಕೆಯಿಂದಾಗಿ ಕಡಿಮೆ ದರದ ಪ್ಯಾಕ್ ಗಳನ್ನು ರದ್ದುಪಡಿಸಲು ಕಂಪನಿಗಳು ಚಿಂತಿಸುತ್ತಿದ್ದಾವೆ.