ಇತ್ತೀಚಿನ ದಿನಗಳಲ್ಲಿ ಮದುವೆ ಸಂಸಾರ ̧ ಗಂಡ ̧ ಮಕ್ಕಳು ಅನ್ನುವುದು ಖಡ್ಡಾಯ ಅನ್ನುವ ರೀತಿಯಲ್ಲಿ ಪ್ರಪಂಚ ತಯಾರಾಗಿಬಿಟ್ಟಿದೆ. ಮತ್ತು ವಯಸ್ಸಾಗುವ ಮುನ್ನವೇ ಮದುವೆಯನ್ನು ಮಾಡಿಕೊಂಡುಬಿಡುತ್ತಾರೆ. ಹೆಸರಾಂತ ಕವಿ ಗೋಪಾಲಕೃಷ್ಣ ಅಡಿಗ ಅವರು ಹೇಳಿರುವಂತೆ ” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ” ಎಂಬ ಸಾಲುಗಳನ್ನು ಈ ನಟಿ ಚಾಚು ತಪ್ಪದೇ ಪಾಲಿಸಿದ್ದಾರೆ. ಹೌದು, ಹರ್ಷ ರಿಚಾರಿಯಾ, ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್. ಕೇವಲ 30ರ ಹರೆಯದ ಈ ಚೆಲುವೆ ಯಾವ ಬಾಲಿವುಡ್ ನಾಯಕಿಗಿಂತ ಕಡಿಮೆ ಇಲ್ಲ. ಸೌಂದರ್ಯದ ಗಣಿಯಂತೆ ಇರುವ ಹರ್ಷ ನಿರೂಪಕಿ ಕೂಡ ಹೌದು. ಮೂಲತಃ ಉತ್ತರಾಖಂಡದವರಾದ ಇವರನ್ನು ಫೇಸ್ಬುಕ್ನಲ್ಲಿ 5.3 ಲಕ್ಷ ಜನ ಹಿಂಬಾಲಿಸುತ್ತಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ದಲ್ಲಿ 681K ಹಿಂಬಾಲಕರು ಇದ್ದಾರೆ.
ಇಂಥಾ ಹರ್ಷ ರಿಚಾರಿಯಾ ಕಳೆದ ಎರಡು ವರ್ಷದ ಹಿಂದೆ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ ಎಂದು ಖುದ್ದು ಹರ್ಷ ರಿಚಾರಿಯಾ ಈ ಮಾತನ್ನು ಹೇಳಿದ್ದಾರೆ. ವಿಶ್ವ ಪ್ರಸಿದ್ದ ಮಹಾಕುಂಭ ಮೇಳದಲ್ಲಿ ಸಾಧ್ವಿಯ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹರ್ಷ ರಿಚಾರಿಯಾ ಅವರ ಈ ವೇಷ ಈಗ ಅನೇಕರ ಹುಬ್ಬೇರಿಸಿದೆ. ಸದ್ಯ ವೈರಲ್ ಆದ ವಿಡಿಯೋದಲ್ಲಿ ಖುದ್ದು ಹರ್ಷ ರಿಚಾರಿಯಾ ಬದುಕಿನಲ್ಲಿ ಎಲ್ಲ ಸುಖವನ್ನು ಅನುಭವಿಸಿದ್ದಾರೆ. ದೇಶ ವಿದೇಶಗಳನ್ನೆಲ್ಲ ಸುತ್ತಿದ್ದಾರೆ. ಆದರೆ ಇವರಿಗೆ ಹೆಸರು ಮತ್ತು ಖ್ಯಾತಿ ಸಿಕ್ಕಿತೇ ಹೊರತು ಮನಃಶಾಂತಿ ಸಿಗಲಿಲ್ಲ. ಹೀಗಾಗಿಯೇ ಆಧ್ಯಾತ್ಮದತ್ತ ಹೊರಳಿದ ಇವರು ಆಚಾರ್ಯ ಮಹಾಮಂಡಲೇಶ್ವರರ ಸ್ವಾಮಿ ಅವರ ಬಳಿ ದೀಕ್ಷೆಯನ್ನು ಪಡೆದಿರುವುದಾಗಿ ಹೇಳಿದ್ದಾರೆ. ಆಧ್ಯಾತ್ಮದಿಂದ ನನಗೆ ಬದುಕಿನಲ್ಲಿ ನೆಮ್ಮದಿ ಮತ್ತು ಮನಸಿಗೆ ಶಾಂತಿ ಸಿಕ್ಕಿದೆ ಎಂದು ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೂಡ ಆಚಾರ್ಯ ಮಹಾಮಂಡಲೇಶ್ವರರ ಸ್ವಾಮಿ ಅವರ ಶಿಷ್ಯೆ ಎಂದು ಬರೆದುಕೊಂಡಿದ್ದಾರೆ. ನಿರೂಪಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಕೂಡ ಉಲ್ಲೇಖಿಸಿದ್ಧಾರೆ.
ಲೌಕಕಿ ಬಂಧನವನ್ನು ತ್ಯಜಿಸಿ ಆಧ್ಯಾತ್ಮಿಕ ಬದುಕಿನ ಮೇಲೆ ತಮ್ಮನ್ನು ತಾವು ಕೇಂದ್ರಿಕರಿಸಿಕೊಳ್ಳಬೇಕು ದೇವರ ಆರಾಧನೆ, ಯೋಗ, ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ಇತರೆ ಅಭ್ಯಾಸಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಆದರೆ ಇವರು ನೋಡಿದರೆ ಕೆಲವೇ ದಿನಗಳ ಹಿಂದೆ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಕಳೆದ ವರ್ಷವಷ್ಟೇ ಕುದರು ಸವಾರಿಯನ್ನು ಮಾಡಿದ್ದಾರೆ. ಕಡಲ ಕಿನಾರೆಯಲ್ಲಿ ಹೊರಳಾಡಿದ್ದಾರೆ. 2023ರಲ್ಲಿ ದುಬೈ ಪ್ರವಾಸ ಮಾಡಿದ್ದಾರೆ. ಬ್ಯಾಂಕಾಕ್ನಲ್ಲಿ ಕಾರ್ಯಕ್ರಮವೊಂದರ ನಿರೂಪಣೆ ಮಾಡಿದ್ದಾರೆ. ಹೀಗಿರುವಾಗ ಎರಡು ವರ್ಷದ ಹಿಂದೆ ದೀಕ್ಷೆಯನ್ನು ಪಡೆಯಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅನೇಕರು ಮಾಡುತ್ತಿದ್ದಾರೆ. ದೀಕ್ಷೆ ಪಡೆದ ಮೇಲೆ ಕೂಡ ಮನುಷ್ಯ ಸಹಜ ಸುಖವನ್ನು ಇವರು ಅನುಭವಿಸಬಹುದಾ ಎಂದು ಟೀಕಿಸಿದ್ದಾರೆ.