ವರ್ಣಬೇಧ ನೀತಿಯ ಬಗ್ಗೆ ಎಲ್ಲರೂ ಕೇಳಿರಬಹುದು. ಹೀಗೆಳುವಾಗ ಮೊದಲು ನೆನಪಾಗುವ ಹೆಸರೇ ನೆಲ್ಸನ್ ಮಂಡೇಲಾ. ವರ್ಣಭೇದ ನೀತಿಯಿಂದಾಗಿ ಬಿಳಿಯರಿಂದ ಕಪ್ಪು ವರ್ಣೀಯರು ನಿರಂತರವಾಗಿ ದಬ್ಬಾಳಿಕೆಗೆ ಒಳಗಾಗುತ್ತಿದ್ದರ ಬಗ್ಗೆ ಓದಿರಬಹುದು. ಈ ತಾರತಮ್ಯವನ್ನು ನಿರ್ಮೂಲನೆ ಮಾಡಲು ಶ್ರಮಿಸಿದವರಲ್ಲಿ ನೆಲ್ಸನ್ ಮಂಡೇಲಾರವರು ಕೂಡ ಒಬ್ಬರು. ಅವರ ಸಾಧನೆಗಳನ್ನು ಗುರುತಿಸಿ ಹಾಗೂ ಈ ಜೀವನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸುವುದು ಅತ್ಯಗತ್ಯ. ಹೀಗಾಗಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಜನ್ಮದಿನವನ್ನು ನೆಲ್ಸನ್ ಮಂಡೇಲಾ ದಿನವೆಂದು ಪ್ರತಿ ವರ್ಷ ಜುಲೈ 18 ರಂದು ಆಚರಿಸಲಾಗುತ್ತದೆ.
ದಕ್ಷಿಣ ಆಫ್ರಿಕಾದ ಗಾಂಧಿಯೆಂದೇ ನೆಲ್ಸನ್ ಮಂಡೇಲಾರವರು ಪ್ರಸಿದ್ಧರಾಗಿದ್ದರು. ವರ್ಣಭೇದ ನೀತಿ-ವಿರೋಧಿ ನಾಯಕ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 18 ರಂದು ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನವನ್ನು ಆಚರಿಸಲಾಗುತ್ತದೆ.