ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಕೇವಲ 1 ರನ್ನಿಂದ ಶತಕ ವಂಚಿತರಾಗಿದ್ದಾರೆ. 99 ರನ್ಗಳಿಸಿ ಆಡುತ್ತಿದ್ದ ಪಂತ್, ಕಿವೀಸ್ ವೇಗಿ ವಿಲಿಯಂ ಓರೂರ್ಕ್ ಅವರ ಎಸೆತವನ್ನು ಡಿಫೆಂಡ್ ಮಾಡುವ ಯತ್ನದಲ್ಲಿ ಬೌಲ್ಡ್ ಆದರು. ಮೊದಲು ಚೆಂಡು ಪಂತ್ ಅವರ ಬ್ಯಾಟ್ನ ಅಂಚಿಗೆ ತಾಗಿ ಆ ಬಳಿಕ ವಿಕೆಟ್ಗೆ ಬಡಿಯಿತು. ಈ ಮೂಲಕ ಪಂತ್ ಕೇವಲ ಒಂದೇ ಒಂದು ರನ್ನಿಂದ ಸ್ಮರಣೀಯ ಶತಕವನ್ನು ಮಿಸ್ ಮಾಡಿಕೊಂಡರು.
ಪಂತ್ ಔಟಾಗುತ್ತಿದ್ದಂತೆ ಇಡೀ ಕ್ರೀಡಾಂಗಣದಲ್ಲಿ ಮೌನ ಆವರಿಸಿತು. ನಾನ್ ಸ್ಟ್ರೈಕ್ನಲ್ಲಿದ್ದ ಕೆಎಲ್ ರಾಹುಲ್ ಕೂಡ ಈ ಆಘಾತವನ್ನು ನಂಬಲು ಸಾಧ್ಯವಾಗದೆ ಹಾಗೆ ಕೆಳಗೆ ಕುಳಿತುಬಿಟ್ಟರು. ಡಗೌಟ್ನಲ್ಲಿ ಕುಳಿತಿದ್ದ ತಂಡದ ಸಹ ಆಟಗಾರರು ಕೆಲ ಸಮಯ ಶಾಕ್ಗೆ ಒಳಗಾಗಿ ಕೆಲವರು ಬಾಯ್ ಮೇಲೆ ಕೈ ಇಟ್ಟುಕೊಂಡರೆ, ಇನ್ನು ಕೆವಲರು ಹತಾಶೆಯಿಂದ ತಲೆ ತಗ್ಗಿಸಿ ಕುಳಿತರು. ಅಂತಿಮವಾಗಿ ಪಂತ್ ಭಾರದ ನೋವಿನಿಂದಲೇ ಮೈದಾನದಿಂದ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು.
ಇದನ್ನೂ ಓದಿ: ಸೊನ್ನೆ ಇಂದ ಶತಕ; ಸರ್ಫರಾಝ್ ಖಾನ್ ಲೆಕ್ಕ..!