ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ವೆಂಕಟ್ ದತ್ತ ಸಾಯಿರವರ ವಿವಾಹ ಅರತಕ್ಷತೆಯು ನಿನ್ನೆ ಹೈದರಾಬಾದ್ನಲ್ಲಿ ನಡೆಯಿತು. ಡಿಸೆಂಬರ್ 22 ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಉದ್ಯಮಿ ವೆಂಕಟ್ ದತ್ತಾ ಸಾಯಿ ಅವರನ್ನು ಸಿಂಧು ವಿವಾಹವಾದರು.
ಇದೀಗ ನಿನ್ನೆ ಹೈದರಾಬಾದ್ನಲ್ಲಿ ವಿವಾಹ ಅರತಕ್ಷತೆಯು ನಡೆದಿದ್ದು. ಈ ನವ ಜೋಡಿಗೆ ಕುಟುಂಬಸ್ಥರು, ನಟ ಅಜಿತ್ ಕುಮಾರ್ ಸೇರಿ ಹಲವು ತಾರೆಯರು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಗಮಿಸಿ ಶುಭ ಹಾರೈಸಿದರು.
ಸಿಂಧು ಮದುವೆ ಆಗ್ತಿರುವ ಹುಡುಗನ ಹೆಸರು ವೆಂಕಟ್ ದತ್ತ ಸಾಯಿ. ಇವರು ಕೂಡ ಮೂಲತಃ ಹೈದರಾಬಾದ್ನವರು. ಉದ್ಯಮಿಯಾಗಿರುವ ವೆಂಕಟ್ ದತ್ತ ಸಾಯಿ, ಸದ್ಯ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಲಿಬರಲ್ ಸ್ಟಡೀಸ್ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. Flame Universityಯಲ್ಲಿ ಬಿಬಿಎ ಅಕೌಂಟಿಂಗ್ ಮತ್ತು ಫಿನಾನ್ಸ್ ಪದವಿ ಮುಗಿಸಿದ್ದಾರೆ. ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನೊಲಜಿ ಸಂಸ್ಥೆಯಲ್ಲಿ ಸೈನ್ಸ್ ಅಂಡ್ ಮಷಿನ್ ಲರ್ನಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ವೆಂಕಟ್ ದತ್ತ ಸಾಯಿ ಅವರು, ಜೆಎಸ್ಡಬ್ಲೂ ಕಂಪನಿಗೆ ಆಂತರಿಕ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. 2019ರಲ್ಲಿ ಆ್ಯಪಲ್ ಅಸೆಟ್ ಮ್ಯಾನೇಜ್ಮೆಂಟ್ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ Posidexನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಐಪಿಎಲ್ ನಿರ್ವಹಣೆಗೆ ಹೋಲಿಸಿದರೆ ನನ್ನ ಫಿನಾನ್ಸ್ ಮತ್ತು ಎಕನಾಮಿಕ್ಸ್ನಲ್ಲಿ ನನ್ನ ಬಿಬಿಎ ಮುಸುಕಾಗಿದೆ. ಈ ಎರಡು ಅನುಭವಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಲಿಂಕ್ಡ್ ಇನ್ ಪ್ರೊಫೈಲ್ನಲ್ಲಿ ಬರೆದುಕೊಂಡಿದ್ದಾರೆ.