ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ಕಿಂಗ್ ಕೊಹ್ಲಿ ಈವಾಗ ಬೋರ್ಡ್ ಎಕ್ಸಾಂ ಬರೆದಿದ್ದಾರೆ ಎಂದರೆ ನಂಬ್ತೀರಾ?. ಬಿಹಾರದಲ್ಲಿ ವಿರಾಟ್ ಕೊಹ್ಲಿ ಬರೆದ ಉತ್ತರ ಪತ್ರಿಕೆ ವೈರಲ್ ಆಗಿದೆ.
ಕೊಹ್ಲಿ ಮತ್ತು ಆರ್ಸಿಬಿ. ಇವೆರಡು ಒಂದೇ ನಾಣ್ಯದ ಮುಖದಂತೆ. ಕೊಹ್ಲಿಯನ್ನು ಜನ ಎಷ್ಟು ಇಷ್ಟಪಡುತ್ತಾರೋ ಅಷ್ಟೇ ಆರ್ಸಿಬಿಯನ್ನು ಇಷ್ಟಪಡುತ್ತಾರೆ. ಅದರಲ್ಲೂ ಪುಟಾಣಿ ಬಾಲಕರಿಗೆ ಕೊಹ್ಲಿ ಅಂದ್ರೆ ಪಂಚಪ್ರಾಣ. ಅದಕ್ಕೆ ನಾನಾ ಉದಾಹರಣೆಗಳು, ಸಾಕ್ಷಿಗಳಿವೆ. ಆದರೆ ಕೊಹ್ಲಿ ಮತ್ತು ಆರ್ಸಿಬಿಯ ಅಪ್ಪಟ ಅಭಿಮಾನಿ ಬಾಲಕನೊಬ್ಬ ಬೋರ್ಡ್ ಎಕ್ಸಾಂನಲ್ಲಿ ಏನು ಮಾಡಿದ್ದಾನೆ ಗೊತ್ತಾ?.
ಕಿಂಗ್ ಕೊಹ್ಲಿಯನ್ನು ಹಾಡಿ ಹೊಗಳುವ ಬಣ ಒಂದೆಯಾದರೆ. ಅವರ ಫೋಟೋವನ್ನು ಹಚ್ಚೆ ಹಾಕಿಸಿಕೊಳ್ಳುವ ಬಣವೊಂದಿದೆ. ಆದರೆ ಇಲ್ಲೊಬ್ಬ ಪುಟ್ಟ ಬಾಲಕ ಬೋರ್ಡ್ ಎಕ್ಸಾಂನ ಉತ್ತರ ಪತ್ರಿಕೆಯಲ್ಲಿ ಕೊಹ್ಲಿ ಮತ್ತು ಆರ್ಸಿಬಿ ಎಂದು ಬರೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಅಂದ ಹಾಗೆಯೇ ಕೊಹ್ಲಿಯೇ ಬಂದು ಎಕ್ಸಾಂ ಬರೆದಂತೆ ಈ ಉತ್ತರ ಪತ್ರಿಕೆ ಕಾಣುತ್ತಿದೆ.
ಬಾಲಕ ಬಿಹಾರ ಮೂಲದವನಾಗಿದ್ದು, ಆರ್ಸಿಬಿ ಅಭಿಮಾನಿಯಾಗಿದ್ದಾನೆ. ತನ್ನ ಬೋರ್ಡ್ ಎಕ್ಸಾಂನ ಉತ್ತರ ಪತ್ರಿಕೆಯಲ್ಲಿ ತನ್ನ ಹೆಸರು ಮತ್ತು ತರಗತಿ ಕುರಿತ ಬಗ್ಗೆ ನಮೂದಿಸುವ ಬದಲು ಕೊಹ್ಲಿ ಮತ್ತು ಆತನ ಜೆರ್ಸಿ ನಂಬರನ್ನು ಬರೆದಿದ್ದಾನೆ. ಜೆಮ್ಸ್ ಆಫ್ ಕ್ರಿಕೆಟ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.
ಬಾಲಕ ದಿನಾಂಕವನ್ನು ನಮೂದಿಸುವಲ್ಲಿ 18 ಆರ್ಸಿಬಿ ಎಂದು ಬರೆದಿದ್ದಾನೆ. ಕೊಹ್ಲಿ ತನ್ನ ಹೆಸರು, ತಾಯಿ ಸರೋಜ್ ಕೊಹ್ಲಿ, ತಂದೆ ಪ್ರೇಮ್ ನಾಥ್ ಕೊಹ್ಲಿ, ತರಗತಿ ಆರ್ಸಿಬಿ, ಸೆಕ್ಷನ್ ಎ, ರೋಲ್ ನಂಬರ್ 18, ವಿಷಯ ಕ್ರಿಕೆಟ್, ಶಿಫ್ಟ್ ಓಪನಿಂಗ್ ಎಂದು ಬರೆದಿದ್ದಾನೆ. ಬಾಲಕನ ಆರ್ಸಿಬಿ ಮತ್ತು ಕೊಹ್ಲಿ ಮೇಲಿನ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.