ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 25 ರನ್ಗಳಿಂದ ಸೋತಿದೆ. ನ್ಯೂಜಿಲೆಂಡ್ ನೀಡಿದ 147 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 29.1 ಓವರ್ಗಳಲ್ಲಿ ಕೇವಲ 121 ರನ್ಗಳಿಗೆ ಆಲೌಟ್ ಆಗಿ ಸೋತಿರುವುದು ಭಾರೀ ಮುಖಭಂಗವಾಗಿದೆ.
ಇನ್ನು, ಟೀಮ್ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್ ವಿಕೆಟ್ ಬ್ಯಾಟರ್ ರಿಷಬ್ ಪಂತ್. ಬರೋಬ್ಬರಿ 64 ರನ್ ಸಿಡಿಸಿ ಟೀಮ್ ಇಂಡಿಯಾ ಪಡೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದ್ರು. ಆದರೆ, ಇವರು ಔಟ್ ಆದ ಕಾರಣ ಭಾರತ ಸೋಲಬೇಕಾಯ್ತು. ಭಾರತ ತಂಡದ ಬ್ಯಾಟರ್ಗಳು ನ್ಯೂಜಿಲೆಂಡ್ ಬೌಲರ್ಗಳ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ರು.
ಇದನ್ನು ಓದಿ:ತಮ್ಮದೇ ಸರ್ಕಾರದ ಮಂತ್ರಿ ವಿರುದ್ಧ ಗುಡುಗಿದ್ದೇಕೆ ಪವನ್ ಕಲ್ಯಾಣ್?
ಬರೋಬ್ಬರಿ 24 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್ವಾಶ್ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಸೋತಿರುವುದು ಇದೇ ಮೊದಲು.
ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಅಜಿತ್ ಅಗರ್ಕರ್, ಕ್ಯಾಪ್ಟನ್ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಸಭೆ ನಡೆಸಿ ಸುದೀರ್ಘ ಚರ್ಚೆ ಮಾಡಿದ್ರು. ಹೇಗಾದ್ರೂ ಮಾಡಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಟೀಂ ಇಂಡಿಯಾ ಅರ್ಹತೆ ಪಡೆಯಬೇಕು ಎಂದು ಚರ್ಚಿಸಿದ್ರು.
ಇದನ್ನು ಓದಿ:ಆಭರಣ ಚಿನ್ನದ ಬೆಲೆ ಭರ್ಜರಿ ಇಳಿಕೆ..!
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಇದು ಬಾರ್ಡರ್ ಗವಾಸ್ಕರ್ ಟ್ರೋಫಿ ಆಗಿದ್ದು, ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 4 ಪಂದ್ಯ ಗೆಲ್ಲಲೇಬೇಕು.
ನವೆಂಬರ್ 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಹೀಗಾಗಿ ಬಿಸಿಸಿಐ ಕನ್ನಡಿಗ ಕೆ.ಎಲ್ ರಾಹುಲ್ಗೆ ಮಹತ್ವದ ಸೂಚನೆ ಕೊಟ್ಟಿದೆ. ಆಸೀಸ್ ಸರಣಿಗೆ ಆಟಗಾರರನ್ನು ಸಜ್ಜುಗೊಳಿಸಲು ಸಿದ್ಧತೆ ಆರಂಭಿಸಿರೋ ಬಿಸಿಸಿಐ ಕೆಎಲ್ ರಾಹುಲ್ ಅವರನ್ನು ಮೊದಲೇ ಆಸ್ಟ್ರೇಲಿಯಾಗೆ ಕಳಿಸಲು ಮುಂದಾಗಿದೆ.
ಇದನ್ನು ಓದಿ:ಗುರುಪ್ರಸಾದ್ ನೆನೆದು ನಟಿ ಕಣ್ಣೀರು!
ನಾಡಿದ್ದು ಎಂದರೆ ನವೆಂಬರ್ 7ನೇ ತಾರೀಕಿನಿಂದ ಆಸ್ಟ್ರೇಲಿಯಾ-ಎ ಹಾಗೂ ಭಾರತ-ಎ ನಡುವೆ 2ನೇ ಅನಧಿಕೃತ ಟೆಸ್ಟ್ ಆಡಲಿದೆ. ಈ ನಾಲ್ಕು ದಿನಗಳ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡಬೇಕು ಎಂದು ಬಿಸಿಸಿಐ ಸೂಚನೆ ನೀಡಿದೆ.