ಸಮೊವಾ ದೇಶದ ಬ್ಯಾಟರ್ ಡಾರಿಯಸ್ ವಿಸ್ಸೆರ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನ ಓವರ್ವೊಂದರಲ್ಲಿ 6 ಸಿಕ್ಸರ್ ಸಿಡಿಸಿದ, ಅಪರೂಪದ ಕ್ಲಬ್ಗೆ ಸೇರ್ಪಡೆ ಗೊಂಡಿದ್ದಾರೆ. ಸಮೊವಾದ ರಾಜಧಾನಿ ಏಪಿಯಾದಲ್ಲಿ ವಾನವಾಟು ವಿರುದ್ಧ ನಡೆದ ಟಿ20 ವಿಶ್ವಕಪ್ನ ಪಶ್ಚಿಮ ಏಷ್ಯಾ-ಪೆಸಿಫಿಕ್ ಪ್ರಾಂತ್ಯದ ಅರ್ಹತಾ ಪಂದ್ಯದಲ್ಲಿ ಡಾರಿಯಸ್ ಈ ಸಾಧನೆಗೈದರು. ವಾನವಾಟು ತಂಡದ ಬೌಲರ್ ನಲಿನ್ ನಿಪಿಕೊ ಎಸೆದ ಓವರಲ್ಲಿ 6 ಸಿಕ್ಸ್ ಸಿಡಿಸಿದರು. ಅಲ್ಲದೇ ಈ ಓವರಲ್ಲಿ 3 ನೋಬಾಲ್ ಸಹ ಇತ್ತು. ಹೀಗಾಗಿ ಓವರಲ್ಲಿ ಒಟ್ಟು 39 ರನ್ ದಾಖಲಾಯಿತು. ಅಂತರಾಷ್ಟ್ರೀಯ ಟಿ20 ಯಲ್ಲಿ ಓವರ್ವೊಂದರಲ್ಲಿ ದಾಖಲಾದ ಅತಿಹೆಚ್ಚು ರನ್ಗಳ ದಾಖಲೆ ಇದು. ಯುವರಾಜ್, ಪೊಲ್ಲಾರ್ಡ್, ನೇಪಾಳದ ದೀಪೇಂದ್ರ ಐರಿ ಅಂ.ರಾ.ಟಿ20 ಪಂದ್ಯದ ಓವರಲ್ಲಿ ಸಿಕ್ಸರ್ ಸಿಡಿಸಿದ್ದಾರೆ.