ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಕೆಲ ಆಟಗಾರರು ಸ್ಥಾನ ಪಡೆದ್ರೆ, ಕೆಲ ಆಟಗಾರರಿಗೆ ಜಾಕ್ಪಾಟ್ ಹೊಡೆದಿದೆ. ಅಷ್ಟೇ ಅಲ್ಲ ದುಲೀಪ್ ಟ್ರೋಫಿಯಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿದ್ರು ಕನ್ನಡಿಗ ಪಡಿಕ್ಕಲ್ಗೆ ಗೇಟ್ಪಾಸ್ ನೀಡಲಾಗಿತ್ತು. ಈಗ ದೇವದತ್ ಪಡಿಕ್ಕಲ್ಗೆ ಗುಡ್ನ್ಯೂಸ್ ಒಂದಿದೆ.
ವಿರಾಟ್ ಕೊಹ್ಲಿ ಆಪ್ತ ಪಡಿಕ್ಕಲ್ಗೆ 2ನೇ ಟೆಸ್ಟ್ ಪಂದ್ಯದಲ್ಲಿ ಮಣೆ ಹಾಕುವ ಸಾಧ್ಯತೆ ಇದೆ. ಒಂದು ವೇಳೆ ಮೊದಲ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ವಿಫಲರಾದ್ರೆ, ದುಲೀಪ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರೋ ದೇವದತ್ಗೆ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ.
ಸದ್ಯ ಅನಂತಪುರ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ ಮಧ್ಯೆ ಮಹತ್ವದ ಪಂದ್ಯ ನಡೆಯುತ್ತಿದೆ. ಇದು ದುಲೀಪ್ ಟ್ರೋಫಿ ಟೂರ್ನಿಯಲ್ಲೇ ಮಹತ್ವದ ಪಂದ್ಯ ಆಗಿದ್ದು, ಇಂಡಿಯಾ ಡಿ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಮಿಂಚಿದ್ದಾರೆ.
ಮಹತ್ವದ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಯಾ ಡಿ ತಂಡಕ್ಕೆ ಪಡಿಕ್ಕಲ್ ಆಸರೆಯಾದ್ರು. ಕೊನೆವರೆಗೂ ಕ್ರೀಸ್ನಲ್ಲೇ ನಿಂತು ತಾಳ್ಮೆಯ ಬ್ಯಾಟಿಂಗ್ ಮಾಡಿದ್ರು.
ಇಂಡಿಯಾ ಎ ಬೌಲರ್ಗಳ ಬೆಂಡೆತ್ತಿದ ಟೀಮ್ ಇಂಡಿಯಾದ ಯುವ ಬ್ಯಾಟರ್ ಪಡಿಕ್ಕಲ್ 124 ಬಾಲ್ನಲ್ಲಿ 92 ರನ್ ಚಚ್ಚಿ ಶತಕ ವಂಚಿತರಾದ್ರು. ಬರೋಬ್ಬರಿ 15 ಫೋರ್ ಸಿಡಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 75ಕ್ಕೂ ಹೆಚ್ಚಿತ್ತು.