ಗೌತಮ್ ಗಂಭೀರ್ ಟೀಂ ಇಂಡಿಯಾದ ನೂತನ ಪ್ರಧಾನ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಸಹಾಯಕ ಕೋಚ್ಗಳ ನೇಮಕದ ಬಗ್ಗೆ ಕುತೂಹಲ ಶುರುವಾಗಿದೆ. ಗಂಭೀರ್ ಜೊತೆ ಕೆಕೆಆರ್ ತಂಡದಲ್ಲಿ ಕೆಲಸ ಮಾಡಿದ, ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ಗೆ ಬ್ಯಾಟಿಂಗ್ ಕೋಚ್ ಹುದ್ದೆ ಸಿಗಲಿದೆ ಎನ್ನಲಾಗುತ್ತಿದೆ. ನಾಯರ್ ಹೆಸರನ್ನು ಗಂಭೀರ್ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ ಬೌಲಿಂಗ್ ಕೋಚ್ ಆಗಿ ಲಕ್ಷ್ಮೀಪತಿ ಬಾಲಾಜಿ ಅಥವಾ ಕರ್ನಾಟಕದ ವಿನಯ್ ಕುಮಾರ್ರನ್ನು ನೇಮಕ ಮಾಡುವಂತೆ ಗಂಭೀರ್ ಕೇಳಿದ್ದಾರೆ ಎನ್ನಲಾಗುತ್ತಿದೆಯಾದರೂ, ಈ ಬಗ್ಗೆ ಖಚಿತತೆ ಇಲ್ಲ. ದ್ರಾವಿಡ್ ಅವಧಿಯಲ್ಲಿ ಫೀಲ್ಡಿಂಗ್ ಕೋಚ್ ಆಗಿದ್ದ ಟಿ.ದಿಲೀಪ್, ಮತ್ತೊಂದು ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.