ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಹೇಗಾದ್ರೂ ಮಾಡಿ ಈ ಬಾರಿ ಕಪ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಿದ್ದಿಗೆ ಬಿದ್ದಿದೆ. ಈಗಾಗಲೇ ಎಲ್ಲಾ ಐಪಿಎಲ್ ತಂಡಗಳಿಗೂ 6 ಆಟಗಾರರ ರೀಟೈನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ.
ಇನ್ನು, ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಅವರನ್ನು ಮೊದಲು ರೀಟೈನ್ ಮಾಡಿಕೊಳ್ಳಲಿದೆ. ಆರ್ಸಿಬಿ ತಂಡ ರೀಟೈನ್ ಮಾಡಿಕೊಳ್ಳೋ 2ನೇ ಪ್ಲೇಯರ್ ಫಾಫ್ ಡುಪ್ಲೆಸಿಸ್. ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೇಂಟ್ ಲೂಯಿಸ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡಿದ ಕಾರಣಕ್ಕೆ ಫಾಫ್ ಅವರನ್ನು ಉಳಿಸಿಕೊಳ್ಳಲಾಗುತ್ತಿದೆ. ಜತೆಗೆ ಮೊಹಮ್ಮದ್ ಸಿರಾಜ್ ಹೆಸರು ಕೂಡ ಆರ್ಸಿಬಿ ರೀಟೈನ್ ಲಿಸ್ಟ್ನಲ್ಲಿದೆ.
ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿನಲ್ಲಿ ಐಪಿಎಲ್ ವಿನ್ನಿಂಗ್ ಕ್ಯಾಪ್ಟನ್ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ. ಹೇಗಾದ್ರೂ ಸರಿ ಕೆಕೆಆರ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹರಾಜಿಗೆ ಬಂದ್ರೆ ಖರೀದಿ ಮಾಡಲೇಬೇಕು ಎನ್ನುವುದು ಆರ್ಸಿಬಿ ಪ್ಲಾನ್. ಇದಕ್ಕಾಗಿ ಎಷ್ಟು ಕೋಟಿ ಬೇಕಾದ್ರೂ ಸುರಿಯಲು ಆರ್ಸಿಬಿ ಸಜ್ಜಾಗಿದೆ. ಇದಕ್ಕೆ ಕಾರಣ ಆರ್ಸಿಬಿ ತಂಡಕ್ಕೆ ಮುಂದಿನ ಸೀಸನ್ನಿಂದಲೇ ಒಳ್ಳೆಯ ಕ್ಯಾಪ್ಟನ್ ಬೇಕಿರುವುದು.
ಇದನ್ನು ಓದಿ : ಟೆಸ್ಟ್ ಸೋಲಿನ ಬೆನ್ನಲ್ಲೇ ವಾರ್ನಿಂಗ್ ಕೊಟ್ಟ ರೋಹಿತ್ ಶರ್ಮಾ!
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ವಿನ್ನಿಂಗ್ ಕ್ಯಾಪ್ಟನ್ ಶ್ರೇಯಸ್. ಗಂಭೀರ್ ಮಾರ್ಗದರ್ಶನದಲ್ಲಿ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲೇ ಕೆಕೆಆರ್ ತಂಡ ಐಪಿಎಲ್ ಕಪ್ ಗೆದ್ದಿದ್ದು. ಈ ತಂಡಕ್ಕೆ ಕ್ಯಾಪ್ಟನ್ ಆಗಿ ಸೂರ್ಯಕುಮಾರ್ ಯಾದವ್ ಎಂಟ್ರಿ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಹಾಗಾಗಿ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡದಿಂದ ಹೊರ ಬೀಳಬಹುದು.