ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ವರ್ಷದ ಕೊನೆಗೆ ನಡೆಯಲಿದೆ. ಈಗಾಗಲೇ 6 ಮಂದಿ ಆಟಗಾರರ ರೀಟೈನ್ ಮಾಡಿಕೊಳ್ಳಲು ಐಪಿಎಲ್ ತಂಡಗಳಿಗೆ ಬಿಸಿಸಿಐ ಅವಕಾಶ ನೀಡಿದೆ. ಹಾಗಾಗಿ ಎಲ್ಲಾ ತಂಡಗಳು ಅಕ್ಟೋಬರ್ 31ನೇ ತಾರೀಕಿನ ಒಳಗೆ ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಸಬೇಕಿದೆ. ಇದರ ಮಧ್ಯೆ ಆರ್ಸಿಬಿಯಿಂದ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ.
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆಯೋದು ಪಕ್ಕಾ ಆಗಿದೆ. ಕಳೆದ ಸೀಸನ್ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ಕಳೆದುಕೊಂಡು ರೋಹಿತ್ ಶರ್ಮಾ ಐಪಿಎಲ್ ಭವಿಷ್ಯ ಅತಂತ್ರವಾಗಿದೆ. ರೋಹಿತ್ ಶರ್ಮಾ ಮುಂದಿನ ನಡೆ ಏನು ಎಂಬುದು ಭಾರೀ ಕುತೂಹಲ ಮೂಡಿಸಿದೆ.
ಇತ್ತೀಚಿನ ವರದಿಗಳ ಪ್ರಕಾರ ಮುಂಬೈ ಫ್ರಾಂಚೈಸಿ ರೋಹಿತ್ ಅವರನ್ನು ಬಿಡುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ ರೋಹಿತ್ ಮೇಲೆ ಮೆಗಾ ಹರಾಜಿನಲ್ಲಿ ಅನೇಕ ತಂಡಗಳು ಕಣ್ಣಿಟ್ಟಿವೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು.
ಭಾರತದ ಸ್ಟಾರ್ ಆಲ್ರೌಂಡರ್ ಆರ್. ಅಶ್ವಿನ್ ಈ ಬಗ್ಗೆ ಮಾತಾಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆರ್ಸಿಬಿ ತಂಡದಲ್ಲಿ ಒಟ್ಟಿಗೆ ಆಡಬಹುದು. ಅದಕ್ಕೆ ಆರ್ಸಿಬಿ ಮೆಗಾ ಹರಾಜಿನಲ್ಲಿ ರೋಹಿತ್ಗಾಗಿ ಕನಿಷ್ಠ 20 ಕೋಟಿ ಮೀಸಲಿಡಬೇಕು ಎಂದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರೋ ತಂಡ ಆರ್ಸಿಬಿ. ಈ ಆರ್ಸಿಬಿಗೆ ಕಳೆದ 17 ವರ್ಷದಿಂದ ಕಪ್ ಗೆಲ್ಲಲಿಲ್ಲ ಅನ್ನೋ ಕೊರಗು ಇದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ರೂ ಒಮ್ಮೆ ಕೂಡ ಚಾಂಪಿಯನ್ ಆಗಿಲ್ಲ. ಹಾಗಾಗಿ 2025ರ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಚಾಂಪಿಯನ್ ಆಗಲು ರೋಹಿತ್ ಬೇಕಾಗಬಹುದು.