ಟಿ20 ವಿಶ್ವಕಪ್ನಿಂದ ದೂರ ಉಳಿದಿದ್ದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಗೆ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿದೆ.
ಇನ್ನು, ಈ ಬಗ್ಗೆ ಮಾತಾಡಿದ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್, ಶ್ರೇಯಸ್ ಅವರನ್ನು ನಾವು ಅಪಾರ್ಥ ಮಾಡಿಕೊಂಡಿದ್ದೇವೆ. ನಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತೇವೆ. ನಮ್ಮನ್ನು ಕ್ಷಮಿಸುವಂತೆ ಶ್ರೇಯಸ್ ಅಯ್ಯರ್ ಅವರನ್ನು ಕೇಳಿಕೊಳ್ಳುತ್ತೇವೆ. ಶ್ರೇಯಸ್ ಅಯ್ಯರ್ ಸದ್ಯದಲ್ಲೇ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ಗೆ ಸೇರಿಸಲಾಗುವುದು. ಇವರು ಎಲ್ಲಾ ಫಾರ್ಮೇಟ್ ಪ್ಲೇಯರ್ ಎಂದರು
ಏನಿದು ವಿವಾದ..?
ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್, ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಾತಿಗೂ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್ ಆಡಲು ಹಿಂದೇಟು ಹಾಕುತ್ತಿದ್ದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ಬಿಸಿಸಿಐ ಬಿಗ್ ಶಾಕ್ ಕೊಟ್ಟಿತ್ತು. ಉದ್ದೇಪೂರ್ವಕವಾಗಿ 2024ರ ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಟೀಮ್ ಇಂಡಿಯಾದ ಯುವ ಬ್ಯಾಟರ್ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕಿತ್ತೆಸೆಯಲಾಗಿತ್ತು.
ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 3 ಕೋಟಿ ರೂ. ನೀಡುವ ಬಿ ಗ್ರೇಡ್ ಒಪ್ಪಂದಕ್ಕೆ ಸೇರಿಸಿಕೊಂಡಿತ್ತು. ಇಶನ್ ಕಿಶನ್ ಕೂಡ ವಾರ್ಷಿಕ 1 ಕೋಟಿ ರೂ. ಗಳಿಸೋ C ಗ್ರೇಡ್ಗೆ ಸೇರ್ಪಡೆಯಾಗಿದ್ದರು. ಬಳಿಕ ಬಿಸಿಸಿಐ ವಾರ್ಷಿಕ ಗುತ್ತಿಗೆ ಅನೌನ್ಸ್ ಆಗಿದ್ದು, ಇಬ್ಬರಿಗೂ ಕೊಕ್ ಕೊಡಲಾಗಿತ್ತು.