ಗೌತಮ್ ಗಂಭೀರ್ ಕೋಚ್ ಆಗಿದ್ದೇ ಬಂತು ಟೀಮ್ ಇಂಡಿಯಾದಲ್ಲಿ ಸ್ಟಾರ್ಗಳ ಆಟಕ್ಕೆ ಫುಲ್ ಬ್ರೇಕ್ ಬಿದ್ದಿದೆ. ಗುರು ಗಂಭೀರ್ ಹೇಳಿದ್ದೇ ವೇದವಾಕ್ಯ. ಇಡೀ ತಂಡ ಈಗ ಕೋಚ್ ಕಂಟ್ರೋಲ್ನಲ್ಲಿದೆ. ಗಂಭೀರ್ ಕೊಟ್ಟ ಗಂಭೀರ ವಾರ್ನಿಂಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾನೇ ಥಂಡಾ ಹೊಡೆದಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕೊಟ್ಟ ಎಚ್ಚರಿಕೆಯನ್ನ ಶಿರಸಾವಹಿಸಿ ಪಾಲಿಸ್ತಿದ್ದಾರೆ.
ಇಂಡೋ-ಬಾಂಗ್ಲಾ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಶ್ರೀಲಂಕಾ ಪ್ರವಾಸದ ಬಳಿಕ ಸುದೀರ್ಘ ವಿಶ್ರಾಂತಿಗೆ ಜಾರಿದ್ದ ಆಟಗಾರರು ಮತ್ತೆ ಫೀಲ್ಡ್ಗೆ ರೀ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಲಂಕಾ ಪ್ರವಾಸದ ಬಳಿಕ ತಿಂಗಳಿಗೂ ಹೆಚ್ಚು ಕಾಲ ಸಿಕ್ಕ ಅವಧಿಯಲ್ಲಿ ಆಟಗಾರರು ಏನು ಮಾಡಿದ್ರೋ, ಬಿಟ್ರೋ ಗೊತ್ತಿಲ್ಲ. ಕೋಚ್ ಗಂಭೀರ್ ಕೊಟ್ಟ ವಾರ್ನಿಂಗ್ಗೆ ತಲೆ ಬಾಗಿರೋದಂತೂ ಸತ್ಯ.
ಕೋಚ್ ಗಂಭೀರ್ ವಾರ್ನಿಂಗ್.!
ಟೀಮ್ ಇಂಡಿಯಾದ ಹೆಡ್ ಕೋಚ್ ಪಟ್ಟವೇರಿದ ಟಿ20 ಸರಣಿಯಲ್ಲಿ ಸಿಂಹಳೀಯರ ಸಂಹರಿಸಿ ಗಂಭೀರ್ ಶುಭಾರಂಭ ಮಾಡಿದ್ರು. ಈ ಸರಣಿ ಗೆದ್ದ ಬೆನ್ನಲ್ಲೇ, ಗುರು ಗೌತಮ್ ಡ್ರೆಸ್ಸಿಂಗ್ ರೂಮ್ನಲ್ಲಿ ಒಂದು ಖಡಕ್ ವಾರ್ನಿಂಗ್ ಕೊಟ್ಟಿದ್ರು. ಆ ಎಚ್ಚರಿಕೆಯ ಎಫೆಕ್ಟ್ ಬಾಂಗ್ಲಾ ಸರಣಿ ಆರಂಭಕ್ಕೂ ಮುನ್ನ ಗೊತ್ತಾಗ್ತಿದೆ.
ಕೆಲ ಆಟಗಾರರು ಏಕದಿನ ಸರಣಿಯಲ್ಲಿ ಇಲ್ಲ. ಅವರಿಗೆ ಸುದೀರ್ಘ ಬ್ರೇಕ್ ಸಿಗಲಿದೆ. ನೀವು ಕಮ್ಬ್ಯಾಕ್ ಮಾಡೋದು ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ. ನೀವು ವಿಶ್ರಾಂತಿ ತೆಗೆದುಕೊಳ್ಳಿ. ಅದಕ್ಕೆ ನೀವು ಅರ್ಹರು. ಆದ್ರೆ, ನಿಮ್ಮ ಸ್ಕಿಲ್ಸ್ ಹಾಗೂ ಫಿಟ್ನೆಸ್ ಮೇಲೆ ವರ್ಕೌಟ್ ಮಾಡಿ. ಆ ಸರಣಿಗೂ ಮುನ್ನ ಫಿಟ್ನೆಸ್ ಮೇಲೆ ಫೋಕಸ್ ಮಾಡ್ತೇವೆ ಅಂದ್ರೆ ಆಗಲ್ಲ. ಆ ಸಮಯದಲ್ಲಿ ಸಂಪೂರ್ಣ ಫಿಟ್ನೆಸ್ ಇರಬೇಕು-ಗಂಭೀರ್
ಲಂಕಾ ಸರಣಿ ಅಂತ್ಯದ ಬಳಿಕ ಮುಂಬೈಗೆ ವಾಪಾಸ್ಸಾಗಿರೋ ರೋಹಿತ್ ಶರ್ಮಾ, ಫಿಟ್ನೆಸ್ ಧ್ಯಾನ ಮಾಡ್ತಿದ್ದಾರೆ. ಜಿಮ್ನಿಂದ ಹೆಚ್ಚು ಅಂತರ ಕಾಯ್ದಿಟ್ಟುಕೊಳ್ತಿದ್ದ ರೋಹಿತ್ ಶರ್ಮಾ, ಇದೀಗ ಭರ್ಜರಿ ವರ್ಕೌಟ್ ಮಾಡ್ತಿದ್ದಾರೆ. ರನ್ನಿಂಗ್, ಕಾರ್ಡಿಯೋ, ವೇಟ್ ಲಿಫ್ಟಿಂಗ್ ಅಂತೆಲ್ಲಾ ಬೆವರಿಳಿಸ್ತಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲ.. ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್ ಸೇರಿದಂತೆ ಎಲ್ಲಾ ಆಟಗಾರರು ಸೀರಿಯಸ್ಸಾಗಿ ವರ್ಕೌಟ್ ಆರಂಭಿಸಿದ್ದಾರೆ. ಜಿಮ್ನಲ್ಲಿ ಗಂಟೆಗಟ್ಟಲೇ ಬೆವರಿಳಿಸ್ತಾ ಫಿಟ್ನೆಸ್ ಕಾಯ್ದುಕೊಳ್ಳೋ ಸರ್ಕಸ್ ಆರಂಭಿಸಿದ್ದಾರೆ.
ಗಂಭೀರ್ ಕೋಚ್ ಪಟ್ಟವೇರಿದ ಬಳಿಕ ಟೀಮ್ ಇಂಡಿಯಾ ಬದಲಾಗ್ತಿದೆ. ಮೊದಲೆಲ್ಲಾ ಸ್ಟಾರ್ಗಿರಿಗೆ ಹೆಚ್ಚಿನ ಆದ್ಯತೆಯಿತ್ತು. ಈಗ ಅದ್ಯಾವುದೂ ನಡೀತಿಲ್ಲ. ಸ್ಟಾರ್ಗಳ ರೆಕ್ಕೆ ಪುಕ್ಕ ಕಟ್ ಆಗಿದೆ. ಈಗೇನಿದ್ರೂ ಗಂಭೀರ್ ಹೇಳಿದ್ದೇ ವೇದವಾಕ್ಯ. ಗುರುವಿನ ಮಾತೇ ಅಂತಿಮ.
ಗಂಭೀರ್ ಕೋಚ್ ಆದ ಬಳಿಕ ಮೊದಲ ಮೀಟಿಂಗ್ನಲ್ಲೇ ಬಿಗ್ ಶಾಕ್ ಕೊಟ್ಟಿದ್ರು. ನೆಕ್ಸ್ಟ್ ಕ್ಯಾಪ್ಟನ್ ಎಂದೇ ಬಿಂಬಿತವಾಗಿದ್ದ ಹಾರ್ದಿಕ್ ಪಾಂಡ್ಯಗೆ ಕೊಕ್ ಕೊಟ್ಟು, ಸೂರ್ಯ ಕುಮಾರ್ಗೆ ಪಟ್ಟ ಕಟ್ಟಿದ್ರು. ಈ ಸರ್ಪ್ರೈಸ್ ನಿರ್ಧಾರದ ಹಿಂದೆ ಗಂಭೀರ್ ಪಾತ್ರ ಮಹತ್ವದ್ದು. ಅಸಲಿಗೆ ಈ ಹಿಂದಿನ ಲಂಕಾ ಎದುರಿನ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ವಿಶ್ರಾಂತಿ ಬಯಸಿದ್ರು. ಕೋಚ್ ಗಂಭೀರ್ ಈ ಸೂಪರ್ ಸ್ಟಾರ್ಗಳ ಮನವಿಯನ್ನೇ ರಿಜೆಕ್ಟ್ ಮಾಡಿದ್ರು. ಪರಿಣಾಮ ಅನಿವಾರ್ಯವಾಗಿ ಇಬ್ಬರೂ ಸರಣಿಯನ್ನಾಡಿದ್ರು.
ಸಪೋರ್ಟ್ ಸ್ಟಾಫ್ಗಳ ಆಯ್ಕೆ ವಿಚಾರದಲ್ಲೂ ಗಂಭೀರ್ ಮೇಲುಗೈ ಸಾಧಿಸಿದ್ರು. ತಮಗೆ ಯಾವೆಲ್ಲಾ ಸಪೋರ್ಟ್ ಸ್ಟಾಫ್ಗಳು ಬೇಕೆಂದು ಬೇಡಿಕೆ ಇಟ್ಟಿದ್ರು. ಬಿಸಿಸಿಐ ಬಾಸ್ಗಳು ಚಕಾರವೆತ್ತದೆ ಗಂಭೀರ್ ಬೇಡಿಕೆಯನ್ನ ಪೂರೈಸಿದ್ರು. ಒಟ್ಟಿನಲ್ಲಿ ಗಂಭೀರ್ ಕೋಚ್ ಗಾದಿಗೇರಿದ ಮೇಲೆ ಟೀಮ್ ಇಂಡಿಯಾಗೆ ಸಂಭಂದಿಸಿದ ಪ್ರತಿ ವಿಚಾರದಲ್ಲೂ ಗಂಭೀರ್ ಬಿಗಿಹಿಡಿತ ಸಾಧಸಿರೋದು ಸ್ಪಷ್ಟವಾಗ್ತಿದೆ. ತಂಡದ ಆಯ್ಕೆ, ಕ್ಯಾಪ್ಟನ್ ಸೆಲೆಕ್ಷನ್, ಸಪೋರ್ಟ್ ಸ್ಟಾಫ್ ಆಯ್ಕೆ, ಫಿಟ್ನೆಸ್ ಮಾನದಂಡ. ಹೀಗೆ ಪ್ರತಿಯೊಂದು ವಿಚಾರದಲ್ಲೂ ಗಂಭೀರ್ ಮಾತೇ ವೇದವಾಕ್ಯವಾಗಿದೆ. ಒಂದೇ ಮಾತಲ್ಲಿ ಹೇಳಬೇಕಂದ್ರೆ, ಇಂಡಿಯನ್ ಕ್ರಿಕೆಟ್ನಲ್ಲೀಗ ಗಂಭೀರ್ ದರ್ಬಾರ್ ಶುರುವಾಗಿದೆ.