ಬೆರಿಲ್ ಚಂಡಮಾರುತದಿಂದಾಗಿ ಕಳೆದ ಮೂರು ದಿನಗಳಿಂದ ಬಾರ್ಬಡೋಸ್ ದ್ವೀಪದಲ್ಲಿ ಸಿಲುಕಿರುವ ಟೀಂ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬಗಳು, ಮಂಡಳಿಯ ಅಧಿಕಾರಿಗಳು ಮತ್ತು ಭಾರತೀಯ ಮಾಧ್ಯಮದವರು ಏರ್ ಇಂಡಿಯಾ ವಿಶೇಷ ಚಾರ್ಟರ್ ವಿಮಾನದ ಮೂಲಕ ನಾಳೆ ಬೆಳಗ್ಗೆ ವಾಪಾಸಾಗುತ್ತಿದ್ದಾರೆ. ವಿಶ್ವಕಪ್ ಟ್ರೋಫಿಯನ್ನ ಹೊತ್ತು ತರುತ್ತಿರುವ ತಂಡವು ಜುಲೈ 4 ಅಂದ್ರೆ ನಾಳೆ ಮುಂಜಾನೆ ಬಾರ್ಬಡೋಸ್ನಿಂದ ದೆಹಲಿಗೆ ಆಗಮಿಸಲಿದೆ. ಇನ್ನು ಟೀಂ ಇಂಡಿಯಾ ಆಟಗಾರರನ್ನು ನಾಳೆ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಪ್ಟ್ರಪತಿಗಳನ್ನು ಕೂಡಾ ಆಟಗಾರರು ಭೇಟಿ ಮಾಡುವ ಸಾಧ್ಯತೆ ಇದೆ.
ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಟೀಂ ಇಂಡಿಯಾ ಸುನಾಮಿ ಕಾರಣದಿಂದ ಬಾರ್ಬಡೋಸ್ನಲ್ಲೇ ಬೀಡು ಬಿಟ್ಟಿತ್ತು. ಈಗ AIC24WC – ಏರ್ ಇಂಡಿಯಾ ಚಾಂಪಿಯನ್ಸ್ 24 ವಿಶ್ವಕಪ್ ಎಂದು ಹೆಸರಿಸಲಾದ ಸ್ಪೆಷಲ್ ಪ್ಲೈಟ್ ಮೂಲಕ ತವರಿಗೆ ಆಗಮಿಸುತ್ತಿದ್ದಾರೆ. ವಿಶ್ವವಿಜೇತ ತಂಡವು ಭಾರತಕ್ಕೆ ಬರುತ್ತಿದ್ದಂತೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಬಳಿಕ ನವದೆಹಲಿಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದೆ ಎಂದು ವರದಿಯಾಗಿದೆ.