ಬರೋಬ್ಬರಿ 24 ವರ್ಷಗಳ ನಂತರ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯ ಸೋಲು ಕಂಡಿದೆ. ಇದು ರೋಹಿತ್ ಶರ್ಮಾ ನಾಯಕತ್ವದ ಭಾರತ ಟೆಸ್ಟ್ ತಂಡಕ್ಕೆ ತೀವ್ರ ಮುಖಭಂಗ ತಂದಿದೆ. ಈ ಬೆನ್ನಲ್ಲೇ ಟೀಮ್ ಇಂಡಿಯಾ ಟಿ20 ಸರಣಿಗಾಗಿ ಸೌತ್ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಭಾರತ ಟಿ20 ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ನೇತೃತ್ವದಲ್ಲಿ ತಂಡ ಕಣಕ್ಕಿಳಿಯುತ್ತಿದೆ.
ನವೆಂಬರ್ 8ನೇ ತಾರೀಕಿನಿಂದ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ಮಧ್ಯೆ 4 ಟಿ20 ಪಂದ್ಯಗಳ ಸರಣಿ ಶುರುವಾಗಲಿದೆ. ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡದ ವಿರುದ್ಧ ಗೆಲ್ಲಲೇಬೇಕು ಎಂದು ಸೌತ್ ಆಫ್ರಿಕಾ ಭಾರೀ ತಯಾರಿ ನಡೆಸಿಕೊಂಡಿದೆ. ಸೌತ್ ಆಫ್ರಿಕಾ ವಿರುದ್ಧ ಸರಣಿಗೆ ಟೀಮ್ ಇಂಡಿಯಾದಲ್ಲಿ ಬಹುತೇಕ ಯುವಕರಿಗೆ ಮಣೆ ಹಾಕಲಾಗಿದೆ. ಟೀಮ್ ಇಂಡಿಯಾಗೆ ಡೆಡ್ಲಿ ಯುವ ಆಲ್ರೌಂಡರ್ ಸ್ಥಾನ ಪಡೆದುಕೊಂಡಿದ್ದು, ಇದು ಹಾರ್ದಿಕ್ ಪಾಂಡ್ಯಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದನ್ನು ಓದಿ: ಡೋನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ!
ಇತ್ತೇಚೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಎ ತಂಡದ ಪರ ಅಮೋಘ ಪ್ರದರ್ಶನ ನೀಡಿದವ್ರು ರಮಣದೀಪ್ ಸಿಂಗ್. ಇವರು ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಮ್ ಇಂಡಿಯಾದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಏಷ್ಯಾಕಪ್ನಲ್ಲಿ ಲೀಗ್ ಹಂತದಲ್ಲಿ ಗೆದ್ದು ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲು ಪ್ರಮುಖ ಕಾರಣ ರಮಣದೀಪ್ ಸಿಂಗ್. ರಮಣದೀಪ್ ಸಿಂಗ್ ಆಲ್ರೌಂಡರ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ರು.
ಅಫ್ಘಾನ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎ ಕ್ಯಾಪ್ಟನ್ ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ಅವರ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಕ್ರೀಸ್ಗೆ ಬಂದ ರಮಣದೀಪ್ ಅಫ್ಘಾನ್ ತಂಡದ ಬೌಲರ್ಗಳ ಬೆಂಡೆತ್ತಿದ್ರು. ಇನ್ನಿಂಗ್ಸ್ ಉದ್ಧಕ್ಕೂ ಭರ್ಜರಿ ಬ್ಯಾಟಿಂಗ್ ಮಾಡಿದ ಯುವ ಆಲ್ರೌಂಡರ್ 64 ರನ್ ಚಚ್ಚಿದ್ರು. ಆದ್ರೂ, ಅಫ್ಘಾನ್ ವಿರುದ್ಧ ಭಾರತ ಸೋತಿತ್ತು.
ಇದನ್ನು ಓದಿ: ನವೆಂಬರ್ ಅಂತ್ಯದ ವೇಳೆಗೆ ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ವೇ ಸಿದ್ಧ!
ಭಾರತ ತಂಡಕ್ಕೆ ರಮಣದೀಪ್ ಸಿಂಗ್ ಎಂಟ್ರಿ ಆಗಿದೆ. ಇವ್ರ ಎಂಟ್ರಿ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಕುತ್ತು ತಂದಿದೆ. ಹಾರ್ದಿಕ್ ಪಾಂಡ್ಯ ಗಾಯಗೊಂಡು ಟೀಮ್ ಇಂಡಿಯಾದಿಂದ ಹೊರಗೆ ಹೋದಲ್ಲಿ ರಮಣದೀಪ್ ಸಿಂಗ್ ಅದೃಷ್ಟ ಖುಲಾಯಿಸಲಿದೆ. ಯುವ ಆಲ್ರೌಂಡರ್ ಏಷ್ಯಾಕಪ್ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 3 ವಿಕೆಟ್ ತೆಗೆದು ಬ್ಯಾಟ್ನಿಂದ 94 ರನ್ ಕೊಡುಗೆ ನೀಡಿದ್ರು.
ಇದನ್ನು ಓದಿ: ನಟ ಅಲ್ಲು ಅರ್ಜುನ್ ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್!
ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವಿಶಾಕ್, ಅವೇಶ್ ಖಾನ್ ಯಶ್ ದಯಾಳ್.