ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದೇ ತಡ ಒಂದಿಲ್ಲೊಂದು ಪ್ರಶ್ನೆಗಳು, ಅನುಮಾನಗಳು ಅಭಿಮಾನಿಗಳನ್ನ ಕಾಡ್ತಾನೇ ಇದೆ. ಹೆಡ್ ಕೋಚ್ ಪಟ್ಟಕ್ಕೇರಿದ ದಿನದಿಂದಲೂ ಗಂಭೀರ್, ಟೀಮ್ ಇಂಡಿಯಾವನ್ನು ಹೇಗೆ ಮುನ್ನಡೆಸ್ತಾರೆ ಅನ್ನೋ ಕುತೂಹಲ ಇತ್ತು. ಲಂಕಾ ಪ್ರವಾಸಕ್ಕೆ ತಂಡದ ಆಯ್ಕೆಯಾದ ಬಳಿಕ ಪ್ರಶ್ನೆಗಳು ಹೆಚ್ಚಾಗಿದ್ವು. ಆ ಎಲ್ಲ ಪ್ರಶ್ನೆಗಳಿಗೆ ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕೋಚ್ ಗೌತಮ್ ಗಂಭೀರ್ ಹಾಗೂ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಕಟ್ & ಕ್ಲೀಯರ್ ಆನ್ಸರ್ ಕೊಟ್ಟಿದ್ದಾರೆ.
ರೋಹಿತ್ ನಿರ್ಗಮನದ ಬಳಿಕ ಹಾರ್ದಿಕ್, ಟಿ20 ನಾಯಕ ಎಂದು ಬಿಂಬಿಸಲಾಗಿತ್ತು. ಆದ್ರೆ ಹಾರ್ದಿಕ್ಗೆ ಕೊಕ್ ನೀಡಿದ ಸೆಲೆಕ್ಷನ್ ಕಮಿಟಿ, ಸೂರ್ಯಗೆ ಪಟ್ಟ ಕಟ್ಟಿದೆ. ಇದಕ್ಕೆ ಕಾರಣ ಏನು ಅನ್ನೋದನ್ನ ಸ್ವತಃ ಅಜಿತ್ ಅಗರ್ಕರ್ ಬಹಿರಂಗ ಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಫಿಟ್ನೆಸ್ ನಮಗೆ ಮುಖ್ಯ. ಸೂರ್ಯಕುಮಾರ್ ಉತ್ತಮ ನಾಯಕನಾಗುವ ಸಾಮರ್ಥ್ಯ ಇದೆ ಎಂದು ಭಾವಿಸಿದ್ದೇವೆ. ಈಗಲೇ ಉತ್ತಮ ನಾಯಕ ಎಂದು ಹೇಳಲು ಆಗಲ್ಲ. 2 ವರ್ಷದ ಕಾಲಾವಧಿಯಲ್ಲಿ ಅವಕಾಶ ನೀಡಬೇಕಿದೆ. ಬಹುಮುಖ್ಯವಾಗಿ ನಮಗೆಲ್ಲ ಸಮಯದಲ್ಲಿ ಲಭ್ಯತೆ ಇರಬೇಕು. ಹಾರ್ದಿಕ್ ಪಾಂಡ್ಯರನ್ನ ಉತ್ತಮವಾಗಿ ಮ್ಯಾನೇಜ್ ಮಾಡಬೇಕಿದೆ. ನಮಗೆ ಆತ ಮುಖ್ಯ ಆಟಗಾರ. ಟಿ20 ವಿಶ್ವಕಪ್ನಲ್ಲಿ ಹಾರ್ದಿಕ್ ಪ್ರದರ್ಶನ ನೋಡಿದ್ದೇವೆ. ಪಾಂಡ್ಯ ಬ್ಯಾಟ್ ಆ್ಯಂಡ್ ಬಾಲ್ನಲ್ಲಿ ಇಂಪಾರ್ಟೆಂಟ್. ಟೀಮ್ ನಮಗೆ ಮುಖ್ಯ.