ಇತ್ತೀಚೆಗೆ ನಡೆದ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಸೋತಿದೆ. ಸೌತ್ ಆಫ್ರಿಕಾ ಗೆದ್ದ ಕಾರಣ 4 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಕಳೆದ 11 ಪಂದ್ಯಗಳಿಂದ ಗೆಲುವಿನ ಓಟ ಮುಂದುವರಿಸಿದ್ದ ಟೀಮ್ ಇಂಡಿಯಾಗೆ ಬ್ರೇಕ್ ಬಿದ್ದಿದೆ.
ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್ನಲ್ಲಿ ಕೇವಲ 124 ರನ್ ಕಲೆ ಹಾಕಿ ಸಾಧಾರಣ ಟಾರ್ಗೆಟ್ ನೀಡಿತ್ತು. ಭಾರತ ತಂಡದ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ವರುಣ್ ಚಕ್ರವರ್ತಿ ಬೌಲಿಂಗ್ ಮಧ್ಯೆಯೂ ಗೆದ್ದು ಬೀಗಿದೆ. ವರುಣ್ ಚಕ್ರವರ್ತಿ ಬ್ಯಾಕ್ ಟು ಬ್ಯಾಕ್ 5 ವಿಕೆಟ್ ಭಾರತವನ್ನು ಗೆಲ್ಲಿಸಲು ಯತ್ನಿಸಿದ್ರು. ಇದರ ಹೊರತಾಗಿಯೂ ಟೀಮ್ ಇಂಡಿಯಾ ಸೋಲಬೇಕಾಯ್ತು.
ಇದನ್ನು ಓದಿ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್ ದಾಖಲು!
ವರುಣ್ ಚಕ್ರವರ್ತಿ ಸ್ಪಿನ್ ದಾಳಿಗೆ ತತ್ತರಿಸಿ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಕೇವಲ 86 ರನ್ಗೆ ಬರೋಬ್ಬರಿ 7 ವಿಕೆಟ್ ಕಳೆದುಕೊಂಡಿತ್ತು. ಆದರೆ, ಈ ಹೊತ್ತಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಟ್ರಿಸ್ಟಾನ್ ಸ್ಟಬ್ಸ್ ಅಜೇಯ 47 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದನ್ನು ಓದಿ: ಜಮೀರ್ ‘ಕಾಲಾ’ ಗೇಲಿ; ಸಿಡಿದೆದ್ದ ಜೆಡಿಎಸ್..!
ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ನೀವು ಎಷ್ಟು ರನ್ ಕಲೆ ಹಾಕಿದ್ರೂ ಗೆಲ್ಲಲು ಯತ್ನಿಸಲೇಬೇಕು. ಟಿ20ಯಲ್ಲಿ 125-140 ರನ್ ಗಳಿಸೋದು ನಮ್ಮ ಟಾರ್ಗೆಟ್ ಅಲ್ಲ. ಆದರೆ, ಟೀಮ್ ಇಂಡಿಯಾ ಬೌಲರ್ಸ್ ನಮಗೆ ಹೆಮ್ಮೆ ಇದೆ ಎಂದರು.
ಇದನ್ನು ಓದಿ: ಯಾವುದೇ ಧರ್ಮ ಮಾಲಿನ್ಯವನ್ನು ಉತ್ತೇಜಿಸುವುದಿಲ್ಲ: ಸುಪ್ರೀಂ ಕೋರ್ಟ್
ಟಿ20 ಕ್ರಿಕೆಟ್ನಲ್ಲಿ 125 ರನ್ ಡಿಫೆಂಡ್ ಮಾಡುವಾಗ 5 ವಿಕೆಟ್ ಪಡೆಯುವುದು ಸಾಮಾನ್ಯವಲ್ಲ. ವರುಣ್ ಚಕ್ರವರ್ತಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ರು. 2021ರಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ವರುಣ್ ಭರ್ಜರಿ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಟೀಮ್ ಇಂಡಿಯಾ ಸೋಲಿಗೆ ನಾವು ಬ್ಯಾಟರ್ಸ್ ಕಾರಣ ಎಂದರು ಸೂರ್ಯ.