ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ಗಳಿಗೆ ಬುಲಾವ್ ನೀಡಿದೆ. ಅಕ್ಟೋಬರ್ 24 ರಂದು ಪುಣೆಯಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
ವಾಷಿಂಗ್ಟನ್ ಸುಂದರ್ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಕ್ಕೆ ಸ್ಥಾನ ಪಡೆದುಕೊಂಡಿದ್ದಾರೆ. ವಾಷಿಂಗ್ಟನ್ ಸುಂದರ್ ಬದಲಿಗೆ ಯಾವ ಆಟಗಾರನ ಡ್ರಾಪ್ ಮಾಡ್ತಾರೆ ಅನ್ನೋದು ಬಹಿರಂಗಗೊಂಡಿಲ್ಲ. ವಾಷಿಂಗ್ಟನ್ ಸುಂದರ್ ತಂಡಕ್ಕೆ ಸೇರ್ಪಡೆಯಾಗುವ ಸುದ್ದಿ ಮಾತ್ರ ಇದೆ.
ಇದನ್ನು ಓದಿ : ಫೈನಲ್ನಲ್ಲಿ ಟೀಮ್ ಇಂಡಿಯಾದ ಲೆಕ್ಕಾಚಾರ ಉಲ್ಟಾ !
ಟೀಂ ಇಂಡಿಯಾ ಸೋಲಿನ ಬಳಿಕ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ವಾಷಿಂಗ್ಟನ್ ಸುಂದರ್ ಈ ಹಿಂದೆ ಭಾರತ ಪರ ಟೆಸ್ಟ್ ಆಡಿದ್ದಾರೆ. 2021ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಸುದೀರ್ಘ ಸಮಯದ ನಂತರ ಸುಂದರ್ ಟೆಸ್ಟ್ ಕ್ರಿಕೆಟ್ಗೆ ವಾಪಸ್ ಆಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಸೋಲಿನ ನಂತರ ಭಾರತ ತಂಡವು ಎರಡನೇ ಪಂದ್ಯದಲ್ಲಿ ಗೆಲುವಿನೊಂದಿಗೆ ಪುಟಿದೇಳಲು ಬಯಸುತ್ತದೆ. ಎರಡನೇ ಟೆಸ್ಟ್ ಆಡುವ 11ರಲ್ಲಿ ಯಾರನ್ನು ಡ್ರಾಪ್ ಮಾಡಲಾಗುತ್ತದೆ? ಯಾರಿಗೆ ಅವಕಾಶ ಸೇರಿಸಿಕೊಳ್ಳಲಾಗುತ್ತಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.