ಎಂ. ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಬರೋಬ್ಬರಿ 8 ವಿಕೆಟ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1-0 ಅಂತರದ ಮುನ್ನಡೆ ಸಾಧಿಸಿದೆ.
ಇನ್ನು, ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ರು. ಕೆಲವೊಮ್ಮೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ. ನಾವು ಈ ಪಂದ್ಯದಲ್ಲಿ ಏನೆಲ್ಲಾ ಚೆನ್ನಾಗಿ ಮಾಡಿದ್ದೇವೆ ಎನ್ನುವುದು ಅರ್ಥಮಾಡಿಕೊಳ್ಳಬೇಕು. ಮುಂದಿನ ಪಂದ್ಯ ಗೆಲ್ಲಲು ಸಜ್ಜಾಗಬೇಕು ಎಂದರು.
ಇದನ್ನು ಓದಿ : ಐಪಿಎಲ್ ವಿನ್ನಿಂಗ್ ಕ್ಯಾಪ್ಟನ್ಗೆ ಆರ್ಸಿಬಿ ಬಿಗ್ ಆಫರ್!
ಈಗಾಗಲೇ ಇಂಥಹ ಪರಿಸ್ಥಿತಿಯನ್ನು ನಾವು ಹಲವು ಬಾರಿ ಎದುರಿಸಿದ್ದೇವೆ. ನಾವು ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯ ಸೋತು 0-1ರ ಹಿನ್ನಡೆಯಲ್ಲಿದ್ದೆವು. ಬಳಿಕ ಅದೇ ಸರಣಿಯನ್ನು 4-1 ಅಂತರದಲ್ಲಿ ಗೆದ್ದು ತೋರಿಸಿದೆವು. ಇದು ಎಲ್ಲರಿಗೂ ನೆನಪಿರಬೇಕು ಎಂದು ಖಡಕ್ ವಾರ್ನಿಂಗ್ ಕೊಟ್ಟರು.
ಭಾರತದ ನೆಲದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ಮೊದಲ ಟೆಸ್ಟ್ ಗೆಲುವು ದಾಖಲಿಸುವಲ್ಲಿ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು ಮೊದಲ ಇನ್ನಿಂಗ್ಸ್ನಲ್ಲಿ ರಚಿನ್ ರವೀಂದ್ರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ 402 ರನ್ ಕಲೆಹಾಕಿತು. ಭಾರೀ ಹಿನ್ನಡೆ ಜತೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಸರ್ಫರಾಜ್ ಖಾನ್(150) ಹಾಗೂ ರಿಷಭ್ ಪಂತ್(99) ನೆರವಿನಿಂದ 462 ರನ್ ಕಲೆಹಾಕಿತು. ಈ ಮೂಲಕ ಕಿವೀಸ್ಗೆ ಗೆಲ್ಲಲು 107 ರನ್ ಗುರಿ ನೀಡಿತು. ಈ ಸಾಧಾರಣ ರನ್ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 2 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿದೆ.